Home ಜಿಲ್ಲೆ ಪತ್ರಕರ್ತರು ಯಾರೊಬ್ಬರ ಕೈಗೊಂಬೆ ಆಗದೆ ಸುದ್ದಿ ಮಾಡಬೇಕು : ಮಾಜಿ ಶಾಸಕ ಪ್ರಕಾಶ ಖಂಡ್ರೆ

ಪತ್ರಕರ್ತರು ಯಾರೊಬ್ಬರ ಕೈಗೊಂಬೆ ಆಗದೆ ಸುದ್ದಿ ಮಾಡಬೇಕು : ಮಾಜಿ ಶಾಸಕ ಪ್ರಕಾಶ ಖಂಡ್ರೆ

ಭಾಲ್ಕಿ :ಆ.1: ತಾಲೂಕಿನ ಗುರುಪ್ರಸನ್ನ ಪದವಿ ಮಹಾ ವಿದ್ಯಾಲಯದಲ್ಲಿ ಪತ್ರಕರ್ತರ ದಿನಾಚರಣೆಯ ಆಚರಿಸಲಾಯಿತು. ನಿಜವಾದ ಪತ್ರಕರ್ತರು ಯಾರೊಬ್ಬರ ಕೈಗೊಂಬೆಯಾಗದೆ ಧೈರ್ಯದಿಂದ ಪತ್ರಿಕಾ ಮಾಧ್ಯಮದವರು ಕಾರ್ಯನಿರ್ವಹಿಸಬೇಕೆಂದು ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಮಾತನಾಡಿದರು.
ಸಮಾಜದಲ್ಲಿ ಅನೇಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ನೂನ್ಯತೆಗಳು, ಒಳ್ಳೆಯ ಕಾರ್ಯಗಳು ಪತ್ರಿಕೆಯಲ್ಲಿ ಮೂಡಿಸಿ ಸಮಾಜಕ್ಕೆ ತಿಳಿಸುವುದು ಪ್ರತಿಯೊಬ್ಬ ಪತ್ರಕರ್ತನ ಆದ್ಯತೆಯಾಗಿದೆ ಎಂದರು. ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿಯಾದ ಸಂತೋಷ ಪಾಟೀಲ್ ಅವರು ಮಾತನಾಡಿ ಪತ್ರಕರ್ತರು ಬಡವರ, ರೈತರ ಅನೇಕ ಕಷ್ಟದಲ್ಲಿದ್ದಾರೆ ಅವರ ಸಮಸ್ಯೆಗಳು, ಬಡ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಪತ್ರಕರ್ತರು ಮಾಡಬೇಕು, ಪತ್ರಕರ್ತರು ಹಿರಿಯರು, ಕಿರಿಯರು ಮುಖ್ಯ ಅಲ್ಲಾ, ತಮ್ಮ ಲಿಪಿಯ ಮೂಲಕ ಯಾವುದೇ ಆಸೆಗೆ ಒಳಗಾಗದೆ, ಹೆದರದೆ ಸುದ್ದಿ ಪ್ರಚಾರ ಮಾಡುತ್ತಾರೋ ಅವರು ನಿಜವಾದ ಪತ್ರಕರ್ತರ ಗೌರವ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಸಂಘದ ಉಪಾಧ್ಯಕ್ಷರಾದ ಪರಶುರಾಮ್ ಕಣರ್ಂ ಮಾತನಾಡಿ ಎದೆಗಾರಿಕೆ ಇದ್ದರೆ ಮಾತ್ರ, ಒಬ್ಬ ಪತ್ರಕರ್ತ ಹೆದರದೆ ಅಂಜದೆ ಸಮಾಜದಲ್ಲಿರುವ ಅಂಕುಡೊಂಕುತಿದ್ದಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಅದೇ ರೀತಿ ಹಿರಿಯ ಪತ್ರಕರ್ತರಾದ ವಿಜಯಕುಮಾರ್ ಪರ್ಮಾ ಪತ್ರಿಕ ಮಾಧ್ಯಮದ ಕುರಿತು ಸವಿಸ್ತಾರವಾಗಿ ತಿಳಿಸಿದರು. ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶಿವರಾಜ್ ಗಂದಗೆ, ತಾಲೂಕ ಬಿಜೆಪಿ ಅಧ್ಯಕ್ಷರಾದ ಈರಣ್ಣ ಕಾರಬಾರಿ ,ಪತ್ರಕರ್ತ ದಿಲೀಪ್ ಸೇರಿಕಾರ ಇದ್ದರು , ಪ್ರಾಂಶುಪಾಲರಾದ ವಿಷ್ಣುವರ್ಧನ್ ಕೋಟೆ ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕಿನ ಎಲ್ಲಾ ಪತ್ರಕರ್ತ ಬಾಂಧವರನ್ನು ಸನ್ಮಾನಿಸಿ ಗೌರವಿಸಲಾಯಿತು.