
ಕಲಬುರಗಿ,ಅ.3: ನರಿಬೋಳ ಚಾಮನೂರಿನ ಸೇತುವೆಗೆ ಅಕ್ಟೋಬರ್ 5 ಒಳಗೆ ಟೆಂಡರ್ ಕರೆಯದಿದ್ದರೆ ಲೋಕೋಪಯೋಗಿ ಇಲಾಖೆ ಭವನ ಎದುರುಗಡೆ ಅನಿರ್ದಿಷ್ಠಾವದಿ ಹಗಲು ರಾತ್ರಿ ಧರಣಿ ನಡೆಸಲಾಗುವದು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ.
2017 ರಲ್ಲಿಪ್ರಾರಂಭವಾಗಿ ಅಗ್ರಿಮೆಂಟ್ ಪ್ರಕಾರವಾಗಿ ಒಂದುವರೆ ವರ್ಷದೊಳಗೆ ಮುಗಿಸಬೇಕಿದ್ದ
ನರಿಬೋಳ ಚಾಮನೂರಿನ ಸೇತುವೆಯು ಹಲವಾರು ವರ್ಷಗಳಾಗುತ್ತಾ ಬಂದಿದ್ದರು ಕಾಮಗಾರಿಯು ಪೂರ್ಣಗೊಂಡಿಲ್ಲ.ಇದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಣ್ಣ ನೀರಾವರಿ ಸಚಿವರುಗಳು ಕ್ಷೇತ್ರಕ್ಕೆ ಸಂಬಂದಿಸಿದ್ದು .
ವಿಶೇಷವಾಗಿ ಮಾಜಿ ಶಾಸಕರ ಗ್ರಾಮ .ಇಂತಲ್ಲೆ ಈ ತರವಾದರೆ ಇನ್ನಿತರ ಕಡೆ ಎನು ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ?
ಹಿಂದಿನ ಗುತ್ತಿಗೆದಾರ ಕಳಪೆ ಕಾಮಗಾರಿಯನ್ನು ಮಾಡಿದ್ದಲ್ಲದೆ ಇರುವಂತ ಎಲ್ಲಾ ಬಜೆಟ್ ಎತ್ತಿಕೊಂಡು ಹೊರಟು ಹೋಗಿದ್ದು ಅವನ ಮೇಲೆ ಅವನ ಕಂಪನಿ ಮೇಲೆ ಕ್ರಮ ಕೈಗೊಳ್ಳೊಕೆ ಸರ್ಕಾರ ಅಧಿಕಾರಿಗಳು ಯತ್ನಿಸುತ್ತಿಲ್ಲ.ಒಟ್ಟಿನಲ್ಲಿ ಅಧಿಕಾರಿಗಳು ಸೇತುವೆಯು ಪೂರ್ಣಗೊಳಿಸಬಾರದೆನ್ನುವ ಕುತಂತ್ರ ಇದೆ ಎನ್ನವಂತಹ ಗುಸುಗುಸು ಇದೆ ಇದರ ಕುರಿತುಉನ್ನತ ಮಟ್ಟದ ತನಿಖೆ ಆಗಲಿ.ಹಾಗು ಚಾಮನೂರು ರೈತರೆಲ್ಲರು ಸೇತುವೆಗ ಬೆಕಾದಂತಹ ಜಮೀನೆಲ್ಲಾ ನೇರ ಮಾರಾಟ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಿ ಒಂದು ವರ್ಷವಾಗಿದೆ .ಆದರೆ ಎನ್ ಎಚ್ ಅಧಿಕಾರಿಗಳು ಜಮೀನು 4161 ಮಾಡಿ ಹಸ್ತಾಂತರ ಮಾಡಬೇಕುಎಂದು ಪತ್ರ ಬರೆದಿರುವುದು ನಾಚಿಕೆ ಗೇಡಿನ ವಿಷಯ.ಸೇತುವೆ ಕೆಲಸ ಪ್ರಾರಂಭವಾಗಿ ಹಲವಾರು ವರ್ಷಗಳಾಗುತ್ತಾ ಬಂದಿದ್ದರು 4161 ಮಾಡದೆ ನಿರ್ಲಕ್ಷ ತೋರಿದ ಅಧಿಕಾರಿಗಳ ಅಮಾನತ್ ಮಾಡಿ ಕೂಡಲೆ ಟೆಂಡರ್ ಕರೆಯಬೇಕು . ಈ ಸಂದರ್ಭದಲ್ಲಿ ಲಕ್ಷ್ಮೀಕಾಂತ ಸ್ವಾದಿ ಮಹೇಶ ಕೆಂಬಾವಿ ಮಂಜುನಾಥ ಇದ್ದರು




















