Home ಜಿಲ್ಲೆ ಅಧಿಕ ಮಾಸೋತ್ಸವ ಉದ್ಘಾಟನೆ

ಅಧಿಕ ಮಾಸೋತ್ಸವ ಉದ್ಘಾಟನೆ

ಧಾರವಾಡ, ಮೇ18 : ಸುಮಾರು ಮೂರು ವರ್ಷಕ್ಕೆ ಒಮ್ಮೆ ಬರುವ ಅಧಿಕ ಮಾಸ, ಮಲ ಮಾಸ, ಪುರುಷೋತ್ತಮ ಟಮಾಸ ಎಂದು ಪ್ರಸಿದ್ಧ ಪಡೆದ ಮಾಸ. ಈ ಮಾಸದಲ್ಲಿ ಎಲ್ಲರೂ ಶಕ್ತಿನುಸಾರ ದಾನ, ಧರ್ಮ ಮೃತಾಚರಣೆ ಭಗವದ್ ಚಿಂತನೆ, ಉಪವಾಸ, ಪರೋಪಕಾರ, ಪಾರಾಯಣ, ಪ್ರದಕ್ಷಿಣೆ, ಜಪ ತಪ, ಭಾಗವತ ಶ್ರವಣಗಳನ್ನು ವಿಶೇಷವಾಗಿ ಅಪೂಪ ದಾನ, ಮುಂತಾದ ಧರ್ಮಚರಣೆಗಳನ್ನು ಅವಶ್ಯವಾಗಿ ಎಲ್ಲರೂ ಮಾಡಬೇಕಾದ ಪುಣ್ಯದಾಯಕ ಮಹಿಮೆಯನ್ನು ನಾರದ ಪುರಾಣ ,ಪದ್ಮ ಪುರಾಣಗಳಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದು ಪಂ. ಪ್ರಹ್ಲಾದಚಾರ್ಯ ಗಲಗಲಿಯವರು ತಿಳಿಸಿದರು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ರಘೋತ್ತಮ ಅವಧಾನಿಯವರ ನಿವಾಸದಲ್ಲಿ ನಡೆದ ಅಧಿಕ ಮಾಸೋತ್ಸವ 2026 ಉದ್ಘಾಟನೆ ಮಾಡುತ್ತಾ ಈ ಶುಭ ಅಧಿಕ ಮಾಸದಲ್ಲಿ ಸೂರ್ಯನು ಯಾವ ರಾಶಿಯಲ್ಲಿಯೂ ಸಂಕ್ರಮಣ ಮಾಡುವುದಿಲ್ಲ ಎಂಬ ಕಾರಣಕ್ಕೆ ,ಯಾವ ಶುಭ ಕಾರ್ಯಗಳಾದ ಮದುವೆ, ಮುಂಜುವೆ, ಗೃಹಪ್ರವೇಶ, ಮುಂತಾದವುಗಳು ವ್ಯರಜ ಎಂದು ತಿಳಿಸಿದರು, ಈ ಮಾಸದ ನಿಯಾಮಕನಾದ ಭಗವಂತ ಪುರುಷೋತ್ತಮನ ಪ್ರೇರಣೆಯಿಂದ, ಪ್ರೀತ್ಯರ್ಥವಾಗಿ ಒಂದು ತಿಂಗಳು ಉಪವಾಸ ಅಥವಾ ಆಯಾಚಿತ ಭೋಜನ, ನಕ್ತ ಭೋಜನ, ವಿಷ್ಣುಪಂಚಕ ವೃತ ಕೇವಲ ಒಂದು ಬಾರಿ ಊಟ, ಇಂತಹ ಅನೇಕ ಧರ್ಮ ಆಚರಣೆಗಳ ಮಹತ್ವವನ್ನು ಕೇಳಲೇಬೇಕಾದ ಮತ್ತು ತಿಳಿದು ಮಾಡಿದಲ್ಲಿ ನಮಗೆಲ್ಲ ಉತ್ತಮ ಲೋಕ ಪ್ರಾಪ್ತಿಯಾಗುತ್ತದೆ ಎಂದು ಸುಂದರವಾಗಿ ವಿಶ್ಲೇಷಿಸಿದರು.

ಕಾರ್ಯಕ್ರಮದ ಪೂರ್ವದಲ್ಲಿ ಪಾರಾಯಣ ಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಸ್ತೋತ್ರ ಮತ್ತು ನಾರಾಯಣಿ ಭಜನಾ ಮಂಡಳಿಯಿಂದ 33 ತಾರತಮ್ಯ ಭಜನೆ ಹರಿವಾಣ ಸೇವೆ ನಡೆಯಿತು. ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಎಲ್. ವಿ. ಜೋಶಿ, ಆನಂದ ದೇಶಪಾಂಡೆ, ಪಾಂಡುರಂಗ ಕುಲಕರ್ಣಿ, ಧೀರೇಂದ್ರ ತಂಗೋಡ, ವಿಶ್ವನಾಥ ಕಾಂಗೋ, ವಿಠ್ಠಲ ಅಂಬೇಕರ, ಪ್ರಶಾಂತ ಕುಲಕರಣಿ , ಶ್ರೀನಿವಾಸ ಪಟ್ಟಣಕೊಡಿ, ಅನಿಲ ಪುರೋಹಿತ, ಪೆÇ್ರ. ಸಿ. ಕೆ. ಕುಲಕರ್ಣಿ, ವಿಲಾಸ ಸಬ್ನೀಸ, ಮುಂತಾದ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.