
ತಾಳಿಕೋಟೆ, ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬೊಳೇಗಾಂವ ಸುಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಭದ್ರಕಾಳಿ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರನ್ನು ಶ್ರೀ ಶಾಂತೇಶ್ವರ ವಿವಿದ್ಧೋದ್ದೇಶಗಳ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಶ್ರೀಮಂತ ಇಂಡಿ ಅವರು ಆಹ್ವಾನಿಸಿದರು.
ಶುಕ್ರವಾರರಂದು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠಕ್ಕೆ ಆಗಮಿಸಿದ ಶ್ರೀಮಂತ ಇಂಡಿ ಅವರು ಶ್ರೀ ಸಿದ್ದಲಿಂಗ ಶ್ರೀಗಳಿಗೆ ಸನ್ಮಾನಿಸಿ ಫಲ-ಪುಷ್ಪ ಹಾಗೂ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸುವದರೊಂದಿಗೆ ಆಶೀರ್ವಾದ ಪಡೆದರು.
ಈ ಸಮಯದಲ್ಲಿ ಸಂಘದ ನಿರ್ದೇಶಕರಾದ ಸಾತಲಿಂಗಪ್ಪ ಸಂಗೊಳಗಿ, ಆನಂದಪ್ಪ ಹುಣಸಗಿ, ಸಂಗು ಪಾಟೀಲ, ಸತೀಶ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.





























