Home ಜಿಲ್ಲೆ ಮಕ್ಕಳ ಹಕ್ಕುಗಳ ರಕ್ಷಣಾ ನೀತಿ ಅನುಷ್ಠಾನ ಮಾಡಿ : ಹಲಮಡಗಿ

ಮಕ್ಕಳ ಹಕ್ಕುಗಳ ರಕ್ಷಣಾ ನೀತಿ ಅನುಷ್ಠಾನ ಮಾಡಿ : ಹಲಮಡಗಿ

ಔರಾದ್ : ಎಲ್ಲ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಾಗಬೇಕು ಮತ್ತು ಮಕ್ಕಳ ರಕ್ಷಣಾ ನೀತಿ 2016ರ ಕಡ್ಡಾಯವಾಗಿ ಅನುಷ್ಠಾನ ಮಾಡುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಹೇಳಿದರು.

ತಾಪಂ ನಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ವ್ಯವಸ್ಥೆ ಹಾಗು ವಿವಿಧ ಇಲಾಖೆಗಳ ತಾಲೂಕು ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲ ನರ್ಸರಿ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳು ಸರ್ಕಾರದ ನಿಯಾಮವಳಿ ಪ್ರಕಾರ ನೊಂದಣೆಯಾಗಬೇಕು. ಅನಧಿಕೃತ ಕೊಚಿಂಗ್ ಸೇಂಟರ್ ಗಳನ್ನು ಮುಚ್ಚಿಸಬೇಕು ಎಂದು ಬಿಇಒ ಅವರಿಗೆ ತಿಳಿಸಿದರು.

ತಾಲೂಕಿನಲ್ಲಿ ಕಡ್ಡಾಯವಾಗಿ ಎರಡು ಸಲ ಬಾಲಕಾರ್ಮಿಕ ಮಕ್ಕಳ ರಕ್ಷಣೆ ಕಾರ್ಯಚರಣೆ ಮತ್ತು ಚಿಂದಿ ಆಯುವ ಮಕ್ಕಳ ರಕ್ಷಣೆ ಕಾರ್ಯಚರಣೆ ಮಾಡುವಂತೆ ಕಾರ್ಮಿಕ ನಿರೀಕ್ಷಕರಿಗೆ ತಿಳಿಸಿದರು. ತಾಲೂಕಿನ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳ ಮಕ್ಕಳ ಮೂಲ ಸೌಕರ್ಯಗಳನ್ನು ದೊರಕಿಸಿಕೊಡಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು. ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಿ, ಕೆಲವು ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಾರದಾ ಕಲ್ಮಾಕರ, ತಹಸೀಲ್ದಾರ ಮಹೇಶ ಪಾಟೀಲ್, ತಾಪಂ ಇಒ ಕಿರಣ ಪಾಟೀಲ್, ಗೌರಿಶಂಕರ ಪರ್ತಾಪೂರೆ, ಸಿಡಿಪಿಒ ರೂಪಾ ಕೋಟೆಗೌಡರ್, ಸುನೀಲಕುಮಾರ ವಾಘಮಾರೆ, ಸಂಗೀತಾ, ತಾಲೂಕು ಆರೋಗ್ಯಾಧಿಕಾರಿ ಡಾ. ಅನೀಲಕುಮಾರ, ಡಾ. ರಮಣ, ಅನೀತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉತ್ತಮ, ಬಿಇಒ ವಾಗಂಬರ ಗಾಯಕವಾಡ, ಕಾರ್ಮಿಕ ಇಲಾಖೆ ರಾಹುಲ ರತ್ನಾಕರ, ಪ್ರಕಾಶ ರಾಠೋಡ್, ಸುನೀಲಕುಮಾರ ವಾಘಮಾರೆ, ಸಂಗೀತಾ ಸೇರಿದಂತೆ ಇನ್ನಿತರರಿದ್ದರು.