
ಕಲಬುರಗಿ, ಅ.8: ಜೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನ, ಅಕ್ರಮ ವಿದ್ಯುತ್ ಸಂಪರ್ಕ ಅಥವಾ ವಿದ್ಯುತ್ ದುರ್ಬಳಕೆ ಕಂಡುಬಂದಲ್ಲಿ ಸಾರ್ವಜನಿಕರು ಜಾಗೃತದಳದ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜೆಸ್ಕಾಂ ಕೋರಿದೆ.
ಕಲಬುರಗಿ ವ್ಯಾಪ್ತಿಯಲ್ಲಿ ಆರ್. ಲತಾ (ಎ.ಇ.ಇ.)-9448450057, ಸೋಮರಾಜ ಪಾಟೀಲ (ಎ.ಇ.) -9480844228, ಅಮರಸಿಂಗ್ (ಎ.ಇ.) – 9480844522 ಹಾಗೂ ದೃವತಾರ (ಪಿ.ಐ.) -9448470132 ಅವರನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು.
ವಿದ್ಯುತ್ ಕಳ್ಳತನ ಹಾಗೂ ಅಕ್ರಮ ವಿದ್ಯುತ್ ಬಳಕೆಯನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಜೆಸ್ಕಾಂ ತಿಳಿಸಿದೆ.























