Home ಜಿಲ್ಲೆ ಕಲಬುರಗಿ ರಸಗೊಬ್ಬರ ಅಕ್ರಮ ಮಾರಾಟ :ಸಮಗ್ರ ತನಿಖೆಗೆ ಆಗ್ರಹ

ರಸಗೊಬ್ಬರ ಅಕ್ರಮ ಮಾರಾಟ :ಸಮಗ್ರ ತನಿಖೆಗೆ ಆಗ್ರಹ

ಕಲಬುರಗಿ,ನ.20: ನಗರದ ಸಬ್ ಅರ್ಬನ್ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿರುವ ಯೂರಿಯಾ ರಸಗೊಬ್ಬರ ಅಕ್ರಮ ದಾಸ್ತಾನು, ಮರುಪ್ಯಾಕಿಂಗ್ ಹಾಗೂ ಕಾಳಸಂತೆ ಮಾರಾಟ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪದ ಅನುಮಾನ ವ್ಯಕ್ತವಾಗುತ್ತಿದ್ದು ಇಲಾಖಾ ತನಿಖೆ ನಡೆಸಿ, ಪ್ರಕರಣದ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಗೆ ರಕ್ಷಣೆ ನೀಡಿದವರ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಬೆಂಗಳೂರಿನಲ್ಲಿ ಪೆÇಲೀಸ್ ಮಹಾನಿರ್ದೇಶಕರು ಹಾಗೂ ಪೆÇಲೀಸ್ ಮಹಾನಿರೀಕ್ಷಕರಿಗೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ
ರಾಷ್ಟ್ರೀಯ ಮಹಿಳಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಜಯಂತಿಗೌಡ, ಸುನಿತಾ ಎಸ್, ಸವಿತ ಸಿ ಎಸ್,ಆರತಿ, ಶೋಭಾ, ಸಲಿಂಖಾನ್,ಆರ್ ಸಿ ಹನುಮಂತರಾಯ, ರವಿಕುಮಾರ ಉಪಸ್ಥಿತರಿದ್ದರು.
ಈ ಅಕ್ರಮ ದಂಧೆಯ ಹಿಂದೆ ಯಾವುದೇ ಪ್ರಭಾವಿ ವ್ಯಕ್ತಿಗಳು, ವ್ಯಾಪಾರಿಗಳು ಅಥವಾ ಅಧಿಕಾರಿಗಳ ಕೈವಾಡವಿದೆಯೇ ಎಂಬುದನ್ನು ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು.ಕೃಷಿ ಇಲಾಖೆ ಅಧಿಕಾರಿಗಳು ಸಲ್ಲಿಸಿರುವ ಲಿಖಿತ ದೂರುಗಳು, ಪರಿಶೀಲನಾ ವರದಿಗಳು ಹಾಗೂ ಜಪ್ತಿ ದಾಖಲೆಗಳನ್ನು ತನಿಖೆಯ ಪ್ರಮುಖ ಸಾಕ್ಷ್ಯಗಳಾಗಿ ಪರಿಗಣಿಸಬೇಕು.ಪ್ರಕರಣದ ತನಿಖೆಯಲ್ಲಿ ಉದ್ದೇಶಪೂರ್ವಕ ವಿಳಂಬ ಅಥವಾ ಸಾಕ್ಷ್ಯ ನಾಶಪಡಿಸುವ ಪ್ರಯತ್ನ ನಡೆದಿದೆಯೇ ಎಂಬುದನ್ನು ಪರಿಶೀಲಿಸಿ, ತಪ್ಪಿತಸ್ಥ ಪೆÇಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಮತ್ತು ಇಲಾಖಾ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.