Home ಜಿಲ್ಲೆ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ.! ಹಡಪದ ಅಪ್ಪಣ್ಣ ಸೇವೆ ಅಪಾರ: ತಹಶೀಲ್ದಾರ್ ಎಸ್. ಎಮ್.ಮ್ಯಾಗೇರಿ

ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ.! ಹಡಪದ ಅಪ್ಪಣ್ಣ ಸೇವೆ ಅಪಾರ: ತಹಶೀಲ್ದಾರ್ ಎಸ್. ಎಮ್.ಮ್ಯಾಗೇರಿ

ಕೊಲ್ಹಾರ :ಜು.೩೦: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಬುದುವಾರ ಬೆಳಿಗ್ಗೆ ೧೦: ೦೦ ಗಂಟೆಗೆ ೮೯೨ನೇ ಹಡಪದ ಅಪ್ಪಣ್ಣ ಜಯಂತಿಯನ್ನು ಸಮಾಜದ ಮುಖಂಡರೊAದಿಗೆ ಜೊತೆ ಆಚರಿಸಲಾಯಿತು. ತಹಶೀಲ್ದಾರ್ ಎಸ್ ಎಮ್ ಮ್ಯಾಗೇರಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು.

ಹನ್ನೆರಡನೆಯ ಶತಮಾನದ ವಚನಕಾರ,ಜಗಜ್ಯೋತಿ ಬಸವಣ್ಣನವರ ಆಪ್ತ ಒಡನಾಡಿ ಶಿವಶರಣ ಹಡಪದ ಅಪ್ಪಣ್ಣನವರು.ಇವರ ೧೨ನೇ ಶತಮಾನದಲ್ಲಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ ಬಸವಣ್ಣನವರ ಆಪ್ತ ಸೇವಕನಾಗಿ, ಬಲಗೈ ಬಂಟನಾಗಿ, ಮತ್ತು ನಿಜಸೇವಕನಾಗಿ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.ತಮ್ಮ ಜ್ಞಾನ ಮತ್ತು ಶರಣ ತತ್ವಗಳ ಮೂಲಕ ಉನ್ನತ ಮಟ್ಟದ ವಚನಕಾರರಾಗಿ ಬೆಳೆದು ಅವರು ವಚನ ಸಾಹಿತ್ಯದಲ್ಲಿ ಕೂಡ ಅವರು ಅನೇಕ ಕ್ರಾಂತಿಯನ್ನು ಮಾಡಿದ್ದಾರೆ.೧೨ನೆಯ ಶತಮಾನದ ಶರಣ ಕ್ರಾಂತಿಯಲ್ಲಿ ತಮ್ಮ ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ ಪ್ರಮುಖ ಶಿವಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು ಎಂದು ಹೇಳಿದರು.
ಹಡಪದ ಅಪ್ಪಣ್ಣನವರ ಕಾಯಕ ಮತ್ತು ಕ್ಷೌರ ಕಾಯಕ ಮಾಡುವ ವೃತ್ತಿ, ಅತ್ಯಂತ ಭಕ್ತಿ ಮತ್ತು ನಿಷ್ಠೆಯಿಂದ ನಿರ್ವಹಿಸುತ್ತಿದ್ದರು ಪ್ರತಿಯೊಂದು ಕಾಯಕವೂ ಪವಿತ್ರವಾದುದು ಎಂಬ ಬಸವಣ್ಣನವರ ತತ್ವಕ್ಕೆ ಅಪ್ಪಣ್ಣನವರು ನಿದರ್ಶನವಾಗಿದ್ದರು ಎಂದರು.

ಹಡಪದ ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಎಂಬ ಗ್ರಾಮದಲ್ಲಿ ಜನಿಸಿದರು.ಇವರ ಧರ್ಮಪತ್ನಿ ಲಿಂಗಮ್ಮ, ಇವರೂ ಸಹ ಶ್ರೇಷ್ಠ ವಚನಕಾರ್ತಿಯಾಗಿದ್ದರು. ಅಪ್ಪನನವರ ಐಕ್ಯ ಸ್ಥಳ ತಂಗಡಿ
ಅAಕಿತನಾಮ:
ಇವರು ತಮ್ಮ ವಚನಗಳಲ್ಲಿ “ಬಸವಪ್ರಿಯ ಕೂಡಲಚನ್ನಸಂಗಮದೇವ” ಎಂಬ ಅಂಕಿತನಾಮವನ್ನು ಬಳಸಿದ್ದಾರೆ.

ವಚನ ಸಾಹಿತ್ಯಕ್ಕೆ ಕೊಡುಗೆ:
ಹಡಪದ ಅಪ್ಪಣ್ಣನವರು ಅನೇಕ ಅರ್ಥಪೂರ್ಣ ವಚನಗಳನ್ನು ರಚಿಸಿದ್ದಾರೆ ಹಡಪದ ಅಪ್ಪಣ್ಣನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ಡಂಭಾಚಾರ, ತಾರತಮ್ಯ ಮತ್ತು ಅಜ್ಞಾನವನ್ನು ಖಂಡಿಸಿದರು.ಅಪ್ಪಣ್ಣನವರು ಬಸವಣ್ಣನವರ ಕೇವಲ ಸೇವಕರಾಗಿರಲಿಲ್ಲ, ಬದಲಿಗೆ ಬಸವಣ್ಣನವರ ಅಂತರAಗದ ಗೆಳೆಯರಾಗಿದ್ದರು. ಕಲ್ಯಾಣದಲ್ಲಿ ಕ್ರಾಂತಿಯಾದಾಗ ಮತ್ತು ಬಸವಣ್ಣನವರು ಕಲ್ಯಾಣವನ್ನು ತೊರೆದು ಕೂಡಲ ಸಂಗಮಕ್ಕೆ ಹೊರಟಾಗ, ಅವರ ಜೊತೆಗೆ ನಿಂತವರು ಹಡಪದ ಅಪ್ಪಣ್ಣನವರು ಮತ್ತು ಬಸವಣ್ಣನವರ ಕೊನೆಯ ಕ್ಷಣದವರೆಗೂ ಅವರ ನೆರಳಿನಂತೆ ಜೊತೆಯಲ್ಲಿದ್ದರು ಎಂದು ಕೇಳಿದರು.
ಹಡಪದ ಅಪ್ಪಣ್ಣನವರು ತಮ್ಮ ಕಾಯಕ ನಿಷ್ಠೆ, ಸರಳತೆ ಮತ್ತು ವೈಚಾರಿಕ ಚಿಂತನೆಗಳಿAದ ಶರಣ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಕಾಯಕ ಸಣ್ಣದಿರಲಿ, ದೊಡ್ಡದಿರಲಿ, ಮಾಡುವ ಕೆಲಸದಲ್ಲಿ ಭಕ್ತಿ ಮತ್ತು ಪ್ರಾಮಾಣಿಕತೆ ಇದ್ದರೆ ಲಿಂಗೈಕ್ಯರಾಗಬಹುದು ಎಂಬುದಕ್ಕೆ ಅಪ್ಪಣ್ಣನವರ ಜೀವನವೇ ಸತ್ಯವಾದ ಉದಾಹರಣೆಸಮಾನತೆಯ ಸಂದೇಶ: ಜಾತಿ-ವರ್ಗಗಳ ಬೇಧವಿಲ್ಲದೆ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಈ ಆಚರಣೆಯ ಮುಖ್ಯ ಉದ್ದೇಶ ಹಡಪದ ಅಪ್ಪಣ್ಣನವರ ಆದರ್ಶ ತತ್ವಗಳನ್ನು ಎಲ್ಲರೂ ಪಾಲಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಎನ್. ಕೆ.ನದಾಫ್, ಗ್ರಾಮ ಆಡಳಿತ ಅಧಿಕಾರಿ ಬಿ.ಎನ್. ಜಿಡ್ಡಿಮನಿ, ಆನಂದ ಇಂಡಿ ಇದ್ದರು. ಸಮಾಜ ಮುಖಂಡರಾದ
ಲಕ್ಷ್ಮಣ.ಸು.ಹಡಪದ,ಮಲ್ಲಪ್ಪ ಹಡಪದ, ಯಲ್ಲಪ್ಪ ಹಡಪದ ಮಂಜು ಹಡಪದ, ಅರ್ಜುನ್ ಹಡಪದ, ಕಾಂತು ಹಡಪದ (ಪತ್ರಕರ್ತರು),ಬಸು ಹ ಹಡಪದ,ಪುಂಡಲೀಕ ಹಡಪದ, ಭೀಮಸಿ ಹಡಪದ, ಈರಪ್ಪ ಹಡಪದ,ಕಲಮೇಶ ಹಡಪದ, ಹಂಪ್ಪಣ್ಣ ಹಡಪದ, ಹಣಮಂತ ಹಡಪದ, ಶಿವು ಹಡಪದ, ಇಸು ಹಡಪದ ಹಾಗೂ ನಾಗಪ್ಪ ಹಡಪದ ಇತರರು ಭಾಗವಹಿಸಿದ್ದರು.