
ಹುಬ್ಬಳ್ಳಿ,ಆ೪: ನಗರದ ಗೋಪನಕೊಪ್ಪ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ೧೯೮೨-೯೨ ರ ಸಾಲಿನ ವಿದ್ಯಾರ್ಥಿಗಳಿಂದ ಗುರುಗಳಿಗೆ ಗುರು ವಂದನಾ ಕಾರ್ಯಕ್ರಮ, ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು. ಉದ್ಯಮಿ ಪ್ರಕಾಶ ಪಾಟೀಲ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪಾಲಿಕೆ ಮಾಜಿ ಸದಸ್ಯ ಪಿ.ಕೆ.ರಾಯನಗೌಡ್ರ ವಹಿಸಿದ್ದರು.
ಲಕ್ಷ÷್ಮಣ್ ದೊಡ್ಡಮನಿ, ಬಸ್ಸು ರೊಟ್ಟಿಗವಾಡ, ನಾಗರಾಜ ಕೊಪ್ಪದ, ಮಂಜು ಶಿರೂರ, ಮಕ್ತುಮ ಜಾಲೇಗಾರ, ಮುರ್ತುಜ್, ಹನುಮಂತ ಗೌಡ, ಕಲ್ಲಪ್ಪ, ಲಲಿತಾ, ಶಾಲಿನಿ, ಶೋಭಾ ಸೇರಿದಂತೆ ಹಳೇ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.































