
ವಿಜಯಪುರ, ಜು. 30: ನಗರದ ಪ್ರತಿಷ್ಠಿತ ಆಕ್ಸ್‍ಫರ್ಡ್ ಐಐಟಿ ಒಲಿಂಪಿಯಾಡ್ ಶಾಲೆಯಲ್ಲಿ ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಪ್ರದೀಪ ಲಿಂಗದಳ್ಳಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಎಸ್. ಬಿ. ಗೊಬ್ಬೂರ ವಹಿಸಿದ್ದರು.
ವಿದ್ಯಾರ್ಥಿಗಳಾದ ಸಮರ್ಥ ಹಾಗೂ ಸುಪ್ರೀತ್ ಸ್ವಾಗತ ಗೀತೆ ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು. 10ನೇ ತರಗತಿಯ ವಿದ್ಯಾರ್ಥಿಗಳಾದ ಅನನ್ಯ, ಪ್ರತೀಕ್ಷಾ ಮತ್ತು ಪ್ರಸನ್ನ ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಾದ ತನುಜಾ, ಅಕ್ಷತಾ ಮತ್ತು ಅರ್ಣವ್ ಗುರು ಪೂರ್ಣಿಮೆಯ ಮಹತ್ವ ಹಾಗೂ ಗುರುಗಳ ಆದರ್ಶ ಪಾತ್ರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕರಾದ ಸಂತೋಷ ಜಿಂಗಾಡೆ, ರೋಹಿತ್ ಕೋಟ್ ಮತ್ತು ನಸ್ರೀನ್ ಮುಜಾವರ್ ಅವರು ಗುರು-ಶಿಷ್ಯ ಪರಂಪರೆಯ ಮಹತ್ವ, ಜೀವನದಲ್ಲಿ ಶಿಕ್ಷಕರ ಮಾರ್ಗದರ್ಶನದ ಅಗತ್ಯತೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಮುಖ್ಯಗುರು ಎಸ್. ಬಿ. ಗೊಬ್ಬೂರ ಅವರು, “ತಾಯಿ-ತಂದೆಯರೇ ನಮ್ಮ ಮೊದಲ ಗುರುಗಳು. ಅವರ ಜೊತೆಗೆ ಜೀವನಕ್ಕೆ ದಾರಿ ತೋರಿಸುವ ಶಿಕ್ಷಕರಿಗೆ ಸದಾ ಗೌರವ ಮತ್ತು ಕೃತಜ್ಞತೆ ಸಲ್ಲಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಶೀಲಾ ಪರಣಾಕರ ನಿರೂಪಿಸಿ, ಶ್ರೀಲತಾ ಮುಂಜಾ ವಂದಿಸಿದರು. ಶಾಲೆಯ ಎಲ್ಲ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು






























