Home ಜಿಲ್ಲೆ ನಾಟ್ಯಶ್ರೀ ನೃತ್ಯಾಲಯದಲ್ಲಿ ಗುರು ಪೂರ್ಣಿಮೆ ಆಚರಣೆ

ನಾಟ್ಯಶ್ರೀ ನೃತ್ಯಾಲಯದಲ್ಲಿ ಗುರು ಪೂರ್ಣಿಮೆ ಆಚರಣೆ

ಬೀದರ್: ನಗರದ ನಾಟ್ಯಶ್ರೀ ನೃತ್ಯಾಲಯದಲ್ಲಿ ಗುರು ಪೂರ್ಣಿಮೆಯನ್ನು ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನೃತ್ಯಾಲಯದ ವಿದ್ಯಾರ್ಥಿಗಳು ತಮಗೆ ಕಲೆ ಧಾರೆ ಎರೆದ ಖ್ಯಾತ ಭರತನಾಟ್ಯ ಕಲಾವಿದೆಯೂ ಆದ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅವರನ್ನು ಶಾಲು ಹೊದಿಸಿ ಗೌರವಿಸಿದರು.
ಉಪನ್ಯಾಸಕಿ ಗೀತಾ ಗಡ್ಡಿ ಅವರು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಗುರು ಪೂರ್ಣಿಮೆ ಮಹತ್ವ ಮನ ಮುಟ್ಟುವಂತೆ ಹೇಳಿದರು.
ನೃತ್ಯಾಲಯದ ನಿರ್ದೇಶಕ ಕೆ. ಸತ್ಯಮೂರ್ತಿ, ದೇವಿದಾಸ ಜೋಶಿ ಮತ್ತಿತರರು ಇದ್ದರು.