Home ಜಿಲ್ಲೆ ಸಿದ್ಧಾರೂಢ ಮಠದಲ್ಲಿ ಶ್ರದ್ಧೆ, ಭಕ್ತಿಯ ಗುರು ಪೂರ್ಣಿಮೆ ಆಚರಣೆ

ಸಿದ್ಧಾರೂಢ ಮಠದಲ್ಲಿ ಶ್ರದ್ಧೆ, ಭಕ್ತಿಯ ಗುರು ಪೂರ್ಣಿಮೆ ಆಚರಣೆ

ಬೀದರ್: ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಗುರು ಪೂರ್ಣಿಮೆಯನ್ನು ಬುಧವಾರ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.
ಶಂಕರಾನAದ ಸ್ವಾಮೀಜಿ, ಮಾತೆ ಆನಂದಮಯಿ, ಸಂಗೀತಾದೇವಿ ಹಾಗೂ ಬಸವಂತರಾಯ ಬಿರಾದಾರ ಅವರು ನಾಣ್ಯಗಳಿಂದ ತುಲಾಭಾರ ಮಾಡಿ ಗುರು ಭಕ್ತಿ ಸಮರ್ಪಿಸಿದರು.
ನಂತರ ಮಠದ ಸಕಲ ಸಾಧಕ-ಸಾಧಕಿಯರು ಷೋಡಶೋಪಚಾರ ಮೂಲಕ ಶ್ರೀಗಳ ಪಾದಪೂಜೆ ನೆರವೇರಿಸಿದರು. ಸುವರ್ಣ ಕಿರಿಟ ಧಾರಣೆ ಮಾಡಿಸಿದರು. ಕನಕ ಪುಷ್ಪ ವೃಷ್ಟಿ ಮಾಡಿ ಗುರು ವಂದನೆ ಸಲ್ಲಿಸಿದರು.
ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಸಾವಿರಾರು ಭಕ್ತರು ಸದ್ಗುರು ದರ್ಶನ ಪಡೆದರು.
ಪ್ರಾಂಪಚಿಕರಿಗೆ ಅನೇಕ ಹಬ್ಬಗಳಿವೆ. ಪರಮಾರ್ಥ ದಾರಿಯಲ್ಲಿ ಸಾಗುವವರಿಗೆ ಗುರು ಪೂರ್ಣಿಮೆ ಶ್ರೇಷ್ಠ ಹಬ್ಬವಾಗಿದೆ ಎಂದು ಸಾನಿಧ್ಯ ವಹಿಸಿದ್ದ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.
ಯಾರೂ ದುಃಖ ಬರಬಾರದೆಂದು ಬಯಸಿ ಸದ್ಗುರುವಿನ ಪಾದಕ್ಕೆ ಶರಣಾಗುತ್ತಾರೆ. ಸದ್ಗುರು ಪಾಪಿಗೂ ಉದ್ಧಾರ ಮಾಡುತ್ತಾನೆ. ಆತ ಕರುಣಾಮಯಿ, ಕೃಪಾಮಯಿ ಆಗಿದ್ದಾನೆ ಎಂದು ತಿಳಿಸಿದರು.
ಕಲಬುರಗಿಯ ಮಾತೆ ಲಕ್ಷ್ಮಿದೇವಿ, ಸೋಲಾಪುರದ ಜಡಿಸಿದ್ಧೇಶ್ವರ ಸ್ವಾಮೀಜಿ, ನಾಸಿಕದ ಮಾತೆ ಮನಿಶಾ, ಗುರುದೇವಾಶ್ರಮದ ಮಾತೆ ಸಿದ್ಧೇಶ್ವರಿ ಗುರು ಪೂರ್ಣಿಮೆ ಹಾಗೂ ಗುರುವಿನ ಮಹತ್ವ ಕುರಿತು ಮಾತನಾಡಿದರು.
ಶಂಕರಾನAದ ಸ್ವಾಮೀಜಿ, ಅದ್ವೈತಾನಂದ ಸ್ವಾಮೀಜಿ, ಶಿವಪ್ರಕಾಶಾನಂದ ಗಿರಿ ಸ್ವಾಮೀಜಿ, ಸ್ವಾತ್ಮಾನಂದಗಿರಿ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಗಣಪತಿ ಮಾಹಾರಾಜ್, ಮಾತೆ ಸುಶಾಂತಾತಾಯಿ, ಮಾತೆ ಸಂಗೀತಾ, ಮಾತೆ ಅಮೃತಾನಂದಮಯಿ, ಮಾತೆ ಜ್ಞಾನೇಶ್ವರಿ, ಪರಮಾನಂದ ಸ್ವಾಮೀಜಿ, ವಿನಾಯಕ ದೇವರು, ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ಜಾಬಶೆಟ್ಟಿ, ಪ್ರಭುಶೆಟ್ಟಿ ಮುದ್ದಾ, ಬಸವರಾಜ ಶೆಟಕಾರ್, ಮಡಿವಾಳಪ್ಪ ಗಂಗಶೆಟ್ಟಿ, ಶಿವಶರಣಪ್ಪ ಸಾವಳಗಿ, ಸುಭಾಷ್ ಉಪ್ಪೆ, ಉದಯಭಾನು ಹಲವಾಯಿ, ಸಹಜಾನಂದ ಕಂದಗೂಳ್, ವೀರೇಖಾ ಪಾಟೀಲ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಸದ್ಭಕ್ತರಾದ ಪ್ರಭು ಬೆಣ್ಣೆ, ಈಶ್ವರಗೌಡ ಕಮಡಳ್ಳಿ, ಅಮರನಾಥ ಕಣಜಿ ಮತ್ತಿತರರು ಇದ್ದರು.