Home ಜಿಲ್ಲೆ ಗುರುಪೂರ್ಣಿಮೆ ಕೃತಜ್ಞತೆ ಸಲ್ಲಿಸುವ ಪವಿತ್ರ ಹಬ್ಬ:ರಾಮಲಿಂಗಯ್ಯಶ್ರೀ

ಗುರುಪೂರ್ಣಿಮೆ ಕೃತಜ್ಞತೆ ಸಲ್ಲಿಸುವ ಪವಿತ್ರ ಹಬ್ಬ:ರಾಮಲಿಂಗಯ್ಯಶ್ರೀ

ತಾಳಿಕೋಟೆ: ಗುರುಪೂರ್ಣಿಮೆ ಭಾರತೀಯ ಸಂಸ್ಕöÈತಿಯಲ್ಲಿ ಗುರುಗಳಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವಾಗಿದೆ. ಈ ದಿನವನ್ನು ಆಷಾಢ ಮಾಸದ ಪೂರ್ಣಿಮೆಯಂದು ಆಚರಿಸಲಾಗುತ್ತದೆ ಎಂದು ಚಬನೂರ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಧರ್ಮಾಧಿಕಾರಿ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.
ಗುರುಪೂರ್ಣಿಮೆ ಅಂಗವಾಗಿ ಸಿದ್ದಿಪುರುಷ ಶ್ರೀ ರಾಮಲಿಂಗೇಶ್ವರ ಮಠದಲ್ಲಿ ಏರ್ಪಡಿಸಲಾದ ಗುರು ನಮನ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಮಹಾಪೂಜೆ ಹಾಗೂ ಗುರುವಿನ ಪಾದಪೂಜೆ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ಈ ಗುರುಪೂರ್ಣಿಮೆಯು ಮಹರ್ಷಿ ವೇದವ್ಯಾಸರ ಜನ್ಮದಿನವೆಂದು ನಂಬಲಾಗುವುದರಿAದ ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಗುರು ಎಂದರೆ ಕೇವಲ ಶಾಲೆಯ ಶಿಕ್ಷಕರಲ್ಲ ಜೀವನದಲ್ಲಿ ಜ್ಞಾನ, ಸಂಸ್ಕಾರ, ಮೌಲ್ಯಗಳು ಮತ್ತು ಸತ್ಪಥವನ್ನು ತೋರಿಸುವ ಎಲ್ಲರೂ ಗುರುಗಳೇ. ತಾಯಿ-ತಂದೆ, ಶಿಕ್ಷಕರು, ಆಧ್ಯಾತ್ಮಿಕ ಗುರುಗಳು ಹಾಗೂ ಜೀವನದಲ್ಲಿ ಮಾರ್ಗದರ್ಶನ ನೀಡುವ ಪ್ರತಿಯೊಬ್ಬರಿಗೂ ಈ ದಿನ ಗೌರವ ಸಲ್ಲಿಸಲಾಗುತ್ತದೆ. ಗುರುಪೂರ್ಣಿಮೆಯಂದು ಶಿಷ್ಯರು ತಮ್ಮ ಗುರುಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ, ಹೂಮಾಲೆ ಅರ್ಪಿಸುತ್ತಾರೆ, ಸನ್ಮಾನ ಮಾಡುತ್ತಾರೆ ಹಾಗೂ ತಮ್ಮ ಜೀವನವನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಸಂಕಲ್ಪ ಮಾಡುತ್ತಾರೆಂದರು.
ಇದೇ ಸಮಯದಲ್ಲಿ ಶ್ರೀಮಠಕ್ಕೆ ಆಗಮಿಸಿದ ಚಬನೂರ ಗ್ರಾಮದ ಭಕ್ತವೃಂದದವರು ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳ ಪಾದ ಪೂಜೆ ನೆರವೇರಿಸಿ ಆಶಿರ್ವಾದ ಪಡೆದುಕೊಂಡರು.

ಈ ಸಮಯದಲ್ಲಿ ಕುಂಟೋಜಿಯ ವೀರೇಶ್ ಶಾಸ್ತಿçಗಳು, ಸಿದ್ದು ಶಾಸ್ತಿçಗಳು, ಪ್ರದೀಪ್ ಶಾಸ್ತಿçಗಳು, ಮಲ್ಲಯ್ಯ ಶಾಸ್ತಿçಗಳು, ಹಾಗೂ ಸೋಮನಗೌಡ ಪಾಟೀಲ, ಮಂಜುನಾಥ ಕವಡಿಮಟ್ಟಿ, ರಾಮನಗೌಡ ನಾರಾಪಾಟೀಲ, ರಾಮನಗೌಡ ಚೌಧರಿ, ಸಂಗನಗೌಡ ಕೋಳೂರು, ಅಮಿತ್‌ಗೌಡ ಪಾಟೀಲ, ಚಬನೂರ ಗ್ರಾಮದ ಸಮಸ್ತ ಶಿಷ್ಯ ವೃಂದದವರು, ತಾಯಂದಿರರು ಉಪಸ್ಥಿತರಿದ್ದರು.

  "ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಃ-ಗುರುB ಸಾಕ್ಷಾತ್ ಪರಬ್ರಹ್ಮ ತಸ್ಮೆöÊ ಶ್ರೀ ಗುರುವೇ ನಮಃ" ಎಂಬAತೆ ಗುರುಪೂರ್ಣಿಮೆ ಜ್ಞಾನ, ಸಂಸ್ಕಾರ, ವಿನಯ ಮತ್ತು ಕೃತಜ್ಞತೆಯ ಮಹತ್ವವನ್ನು ಸಾರುವ ಪವಿತ್ರ ಹಬ್ಬವಾಗಿದೆ. ಗುರುಗಳ ಮಾರ್ಗದರ್ಶನವೇ ಜೀವನದ ಯಶಸ್ಸಿನ ನಿಜವಾದ ದಾರಿದೀಪವಾಗಿದೆ.
                                                           ಶ್ರೀ ರಾಮಲಿಂಗಯ್ಯಶ್ರೀ
                                                        ಶ್ರೀಮಠದ ಧರ್ಮಾಧಿಕಾರಿಗಳು