Home ಮುಖಪುಟ ಸುದ್ದಿ ಜಿಎಸ್ ಪಾಟೀಲ್ ಸ್ಪೀಕರ್,ಸಲೀಂ ಅಹ್ಮದ್ ಪರಿಷತ್ ಸಭಾಪತಿ

ಜಿಎಸ್ ಪಾಟೀಲ್ ಸ್ಪೀಕರ್,ಸಲೀಂ ಅಹ್ಮದ್ ಪರಿಷತ್ ಸಭಾಪತಿ

ಬೆಂಗಳೂರು, ಆ. ೩- ರಾಜ್ಯದ ೨೦ ನೂತನ ಸಚಿವರ ಹೆಸರನ್ನು ಪ್ರಕಟಿಸಿರುವ ಕಾಂಗ್ರೆಸ್ ಹೈಕಮಾಂಡ್ ವಿಧಾನಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ ಸ್ಥಾನಕ್ಕೂ ಹೆಸರುಗಳನ್ನು ಅಂತಿಮಗೊಳಿಸಿದೆ.


ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಗದಗ ಜಿಲ್ಲೆಯ ರೋಣಾ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ರವರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಉಪಸಭಾಧ್ಯಕ್ಷ ಸ್ಥಾನಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣರವರ ಹೆಸರು ಅಂತಿಮವಾಗಿದೆ.


ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಸಲೀಂ ಮಹಮದ್ ಹಾಗೂ ಉಪಸಭಾಪತಿಯಾಗಿ ಉಮಾಶ್ರೀಯವರ ಹೆಸರನ್ನು ಹೈಕಮಾಂಡ್ ಆಖೈರುಗೊಳಿಸಿದೆ.