Home ಜಿಲ್ಲೆ ಕಲಬುರಗಿ ಗ್ರಾಪಂ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಗ್ರಾಪಂ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ,ಆ.4: ಪತಿ ಹೆಸರಿನಲ್ಲಿದ್ದ ಖಾಲಿ ನಿವೇಶನವನ್ನು ಪತ್ನಿ ಹೆಸರಿಗೆ ವರ್ಗಾಯಿಸಲು 9,950 ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಪೆÇಲೀಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕಿನ ಹಾಗರಗಾ ಪಂಚಾಯಿತಿ ಕಾರ್ಯದರ್ಶಿ ವೇದಾಂಗ ಲೋಕಾ ಬಲೆಗೆ ಬಿದ್ದವರು.
ಕಿಶನ ಪವಾರ ಅವರ ಹೆಸರಿನಲ್ಲಿ ಹಾಗರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಜಾದಪುರದಲ್ಲಿ ಸಂ.12 ಸರ್ವೆ ನಂ. 111/1ರಲ್ಲಿ ಖಾಲಿ ನಿವೇಶನ ಇತ್ತು. ಅವರು ಮೃತಪಟ್ಟಿದ್ದಾರೆ. ಅವರ ಹೆಸರಿನಲ್ಲಿದ್ದ ನಿವೇಶನವನ್ನು ಸದ್ಯ ಮುಂಬೈನಲ್ಲಿರುವ ಅವರ ಪತ್ನಿ ದಸ್ಮಾಬಾಯಿ ಕಿಶನ್ ಪವಾರ ಹೆಸರಿಗೆ ವರ್ಗಾಯಿಸುವಂತೆ ಅವರ ಅಳಿಯ ಸಂಜೀವ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ವೇದಾಂಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ಸಂಜೀವ ಲೋಕಾಯುಕ್ತ ಪೆÇಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಪೆÇಲೀಸ್ ಅಧೀಕ್ಷಕ ಸಿದ್ಧರಾಜು. ಸಿ. ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್‍ಸ್ಪೆಕ್ಟರ್ ರವಿ ಪವಾರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.