Home ಜಿಲ್ಲೆ ಕಲಬುರಗಿ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆ ಹಾಗೂ ದಕ್ಷ ಸೇವೆಯಿಂದ ಜನಮಾನಸದಲ್ಲಿ ಸದಾಕಾಲ ಉಳಿಯುತ್ತಾರೆ: ಬಸವರಾಜ ಪಾಟೀಲ ಊಡಗಿ

ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆ ಹಾಗೂ ದಕ್ಷ ಸೇವೆಯಿಂದ ಜನಮಾನಸದಲ್ಲಿ ಸದಾಕಾಲ ಉಳಿಯುತ್ತಾರೆ: ಬಸವರಾಜ ಪಾಟೀಲ ಊಡಗಿ

ಸೇಡಂ,ಆ,06:ಸರ್ಕಾರಿ ಹುದ್ದೆ ಎಂಬುದು ಕೇವಲ ಅಧಿಕಾರ ಚಲಾಯಿಸುವ ಸ್ಥಾನವಲ್ಲ ಅದು ಜನಸೇವೆಯ ಮಹತ್ತರ ಜವಾಬ್ದಾರಿ. ಭ್ರಷ್ಟಾಚಾರ ಹಾಗೂ ಅಕ್ರಮಗಳಿಲ್ಲದೆ ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಾಮಾಣಿಕ ಹಾಗೂ ದಕ್ಷ ಸೇವೆ ಸಲ್ಲಿಸುವ ಅಧಿಕಾರಿಗಳು ನಿವೃತ್ತರಾದರೂ ಸಾರ್ವಜನಿಕರ ಮನಸ್ಸಿನಲ್ಲಿ ಸದಾಕಾಲ ಉಳಿಯುತ್ತಾರೆ ಎಂದು ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ ಅಭಿಪ್ರಾಯಪಟ್ಟರು. ನಗರದ ಹೊರವಲಯದಲ್ಲಿರುವ ಸರ್ಕಿಟ್ ಹೌಸ್ ನಲ್ಲಿ ಲೋಕೋಪಯೋಗಿ ಇಲಾಖೆಯ ಇಇ ಶಿವಶರಣ ಜೇವರ್ಗಿ ಅವರ ಸೇವಾ ನಿವೃತ್ತಿ ಬೀಳ್ಕೊಡುಗೆ ಸನ್ಮಾನ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿವಶರಣ ಜೇವರ್ಗಿ ಮೂರು ವರ್ಷದ ಅವಧಿಯಲ್ಲಿ ಡಬಲ್ ರಸ್ತೆ ವಿವಿಧ ಸೇತುವೆ ನಿರ್ಮಾಣ ಕಾಮಗಾರಿಗೆ ಇವರ ಅಲ್ಪ ಸೇವೆ ನೀಡಿದ್ದು ಸಂತಸ ತಂದಿದೆ ಎಂದರು. ಈ ಸಮಾರಂಭದಲ್ಲಿ ಸಹಾಯಕ ಉಪ ವಿಭಾಗಾಧಿಕಾರಿ ಪ್ರಭು ರೆಡ್ಡಿ, ತಹಸಿಲ್ದಾರ್ ಶ್ರೀಮತಿ ಶ್ರೀಯಾಂಕ್ ಧನಶ್ರೀ ಲೋಕೋಪಯೋಗಿ ಇಲಾಖೆಯ ಇಇ ಪ್ರಭಯ್ಯ ಮಠ, ಜೀನ್ಸ್ ನಿರ್ದೇಶಕರಾದ ಡಾ. ಉಮೇಶ್, ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧಿಕಾರಿಗಳಾದ ದಶವಂತ ಗಾಜರೆ, ಶರಣಪ್ಪ ಸುಲಗುಂಟೆ, ಸುರೇಶ್ ಶರ್ಮಾ, ಮೀನಾಕ್ಷಿ ಎಸ್ ಜೇವರ್ಗಿ ಮಾತನಾಡಿದರು, ಈ ವೇಳೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಎಇಇ ವಿಶ್ವನಾಥ ಮಾವಿನಗಿಡ, ಶಿವಶರಣ ರೆಡ್ಡಿ ಪಾಟೀಲ್, ವಿಶ್ವನಾಥ ಪಾಟೀಲ ಬೋಮ್ನಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾರುತಿ ಹುಜರಾತಿ, ಸಹಾಯಕ ಇಂಜಿನಿಯರಗಳಾದ ಗುರುರಾಜ, ಗುರುಪ್ರಸಾದ್ ಸೇರಿದಂತೆ ಅನೇಕರು ಇದ್ದರು.