Home ಜಿಲ್ಲೆ ರೈತರ ಕಬ್ಬಿನ ಬಿಲ್ ಸಂಪೂರ್ಣ ಪಾವತಿ

ರೈತರ ಕಬ್ಬಿನ ಬಿಲ್ ಸಂಪೂರ್ಣ ಪಾವತಿ

ಭಾಲ್ಕಿ:ಜು.೩೦: ತಾಲೂಕಿನ ಹುಣಜಿ(ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ೨೦೨೬-೨೭ನೇ ಹಂಗಾಮಿನ ಮಿಲ್ ರೂಲರ್ ಪೂಜೆಯನ್ನು ಕಾರ್ಖಾನೆ ಅಧ್ಯಕ್ಷ ಅಮರಕುಮಾರ ಖಂಡ್ರೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗಡಿಜಿಲ್ಲೆ ಬೀದರ್‌ನಲ್ಲಿ ಕಳೆದ ಎರಡು ತಿಂಗಳಿನಿAದ ಮುಂಗಾರು ಮಳೆ ಕೊರತೆ ಉಂಟಾಗಿದೆ.

ಆದರೆ ಇದೀಗ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು ರೈತರಲ್ಲಿ ಹೊಸ ಆಶಾಕಿರಣ ಮೂಡಿದೆ.
ಈ ಮಳೆ ಕಬ್ಬು ಬೆಳೆಯುವ ಪ್ರದೇಶಕ್ಕೆ ಹೆಚ್ಚು ಅನುಕೂಲ ಆಗಲಿದೆ ಎಂದರು. ಕಳೆದ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರ ಖಾತೆಗಳಿಗೆ ಯಾವುದೇ ಬಾಕಿ ಉಳಿಸಿ ಕೊಳ್ಳದೇ ನಿಯಮನುಸಾರ ಸಂಪೂರ್ಣ ಹಣವನ್ನು ಪಾವತಿಸಲಾಗಿದೆ.
ಕಾರ್ಖಾನೆಯಲ್ಲಿ ಮಿಲ್ ವಿಭಾಗ ಸಿದ್ಧವಾಗುತ್ತಿದ್ದು ನೌಕರರು ಮತ್ತು ಸಿಬ್ಬಂದಿಗಳು ಹೆಚ್ಚು ಉತ್ಸಾಹ ದಿಂದ ಕಾರ್ಯನಿರ್ವಹಿಸಿ ಬರುವ ಹಂಗಾಮು ಯಶಸ್ವಿಯಾಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಹದ್ದೂರ ಅಲಿ ಮುಜಾವರ, ಪ್ರಧಾನ ವ್ಯವಸ್ಥಾಪಕರು(ಕಬ್ಬು) ಪ್ರಭು ಧರಣೆ, ವಿದ್ಯುತ್ ವಿಭಾಗದ ವ್ಯವಸ್ಥಾಪಕರು ಮಹಾದೇವ ಡೊಂಗ್ರೆ, ಕಚೇರಿ ಅಧೀಕ್ಷಕ ರಮೇಶ ಚಿದ್ರಿ, ಉಪ ಮುಖ್ಯ ಅಭಿಯಂತರ ಸಂಜೀವ ಖಂಡೆ, ಅಭಿಯಂತರ ರೇವಣೇಶ ವೀರಶೆಟ್ಟಿ, ಉಮೇಶ ಚಿದ್ರಿ, ಗುರುನಾಥ ಸ್ವಾಮಿ, ಉತ್ಪಾದನಾ ವಿಭಾಗದ ರಾಜಶೇಖರ, ರಾಜಕುಮಾರ ಬಿರಾದಾರ ಸೇರಿದಂತೆ ಹಲವರು ಇದ್ದರು.