Home ಜಿಲ್ಲೆ ಮಳೆಗಾಗಿ ಕಪ್ಪೆಗಳ ಮದುವೆ

ಮಳೆಗಾಗಿ ಕಪ್ಪೆಗಳ ಮದುವೆ

ಬಸವಕಲ್ಯಾಣ: ತಾಲೂಕಿನ ಸುಕ್ಷೇತ್ರ ಯಲದಗುಂಡಿ ಗ್ರಾಮದಲ್ಲಿ ಮಳೆಗಾಗಿ ಕಪ್ಪೆಗಳ ಮದುವೆ ಮಾಡಲಾಯಿತು.
ಮುಂಗಾರು ಆರಂಭವಾದರೂ ಸಮರ್ಪಕ ಮಳೆ ಸುರಿದ ಹಿನ್ನೆಲೆಯಲ್ಲಿ ವರುಣ ದೇವರ ಕೃಪೆಗಾಗಿ ತಾಲೂಕಿನ ಯಲದಗುಂಡಿ ಗ್ರಾಮದಲ್ಲಿ ಗ್ರಾಮದ ಮಹಿಳೆಯರು ಸಂಪ್ರದಾಯದ ಪ್ರಕಾರ ಕಪ್ಪೆಗಳಿಗೆ ಮದುವೆ ಮಾಡಿ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿದರು.
ನಂತರ ಮದುವೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
ಖ್ಯಾದಾಬಾಯಿ ಎಲ್ದೆ, ಸಿದ್ದಮ್ಮ ಎನ್. ಮಾಲಿಪಾಟೀಲ, ರತ್ನಾಬಾಯಿ ಪೆÇಲೀಸ್ ಪಾಟೀಲ, ಶೋಭಾವತಿ ತಾಟೆ, ಸತ್ಯದೇವಿ ಮಠಪತಿ, ಮಹಾದೇವಿ ಪೆÇಲೀಸ್ ಪಾಟೀಲ, ಪೂಜಾ ಮಠಪತಿ, ಜಗದೇವಿ ಬಾಳೆ, ಜ್ಯೋತಿ ಇಂಡೆ, ಸಂಪತಾಬಾಯಿ ಜಂಗಲೆ, ತಾರಾಮತಿ ಭಂಗೆ ಈಜಮ್ಮ ಭಂಗೆ, ಮಂಗಲಾ ಚಿಂಚೋಳೆ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.