Home ಜಿಲ್ಲೆ ಕಲಬುರಗಿ ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ ಪ್ರಯುಕ್ತ ಪುಷ್ಪಾರ್ಚನೆ

ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ ಪ್ರಯುಕ್ತ ಪುಷ್ಪಾರ್ಚನೆ

ಕಲಬುರಗಿ,ಆ.31: ಇಲ್ಲಿನ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಆಚರಿಸಲಾಯಿತು.
ಬೆಳಿಗ್ಗೆ ರಾಯರ ಅಷ್ಟೋತ್ತರ, ಪಾರಾಯಣ, ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ, ನಂತರ ಪಂ ಶ್ರೀನಿವಾಚಾರ್ಯ ಪದಕಿ ಅವರಿಂದ ಪ್ರವಚನ, ಅನಂತ ಚಿಂಚನಸೂರ್ ಅವರ ತಂಡದವರಿಂದ ಭರತನಾಟ್ಯ ನೆರವೇರಿತು. ನಂತರ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪುಷ್ಪಾರ್ಚನೆ ನೆರವೇರಿತು.
ಹಸ್ತೋದಕ ಮಹಾಮಂಗಳಾರತಿ, ನಂತರ ಬಂದ ಭಕ್ತರಿಗೆ ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಅರ್ಚಕರಾದ ಗುಂಡಾಚಾರ್ಯ ನರಿಬೋಳ, ನರಸಿಂಹ ಅಗ್ನಿಹೋತ್ರಿ, ಪ್ರಮೋದ ಪಂತ, ಗುರುರಾಜ ಬಂಕುರ, ವಿಜಯಕುಮಾರ ದೇವನಳ್ಳಿ, ಶಾಮರಾವ ಕುಲಕರ್ಣಿ, ಶ್ರೀನಿವಾಸ ನೆಲೋಗಿ, ಗೋಪಾಲರಾವ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.