
ಕಲಬುರಗಿ:ಜೂ.೧:ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ್ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪರಿಸರದಲ್ಲಿ ಪ್ರಥಮ ಪಿಯುಸಿ ಸರ್ವ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ಹಾಗೂ ಉಪನ್ಯಾಸಕರಿಂದ ಸಿಹಿ ಮತ್ತು ಪೆನ್ನು ನೀಡುವುದರ ಮುಖಾಂತರ ಸ್ವಾಗತಿಸಲಾಯಿತು. ಸರಸ್ವತಿ ಭಾವಚಿತ್ರಕ್ಕೆ ಮುಖ್ಯಅತಿಥಿಗಳಾದ ಶ್ರೀ ಶಶಿಲ್ ಜಿ. ನಮೋಶಿ, ಡಾ. ವಿಶಾಲದತ್ತ ವಿ. ಕೋಹಿರ್, ಸಂಸ್ಥೆಯ ಸದಸ್ಯರು ಹಾಗೂ ಪ್ರಾಚಾರ್ಯರಾದ ಡಾ. ಭುರ್ಲಿ ಪ್ರಹ್ಲಾದ ಮತ್ತು ಆಡಳಿತಾಧಿಕಾರಿಗಳಾದ ಶ್ರೀಮತಿ. ಜ್ಯೋತಿ ಭುರ್ಲಿ ಹಾಗೂ ವಿದ್ಯಾರ್ಥಿಗಳು ದೀಪ ಬೆಳಗಿಸಿ, ಪೂಜೆಯನ್ನು ಸಲ್ಲಿಸಿದರು.
ಕಾಲೇಜಿನ ಆವರಣದಲ್ಲಿ ಇಂದು ಹಬ್ಬದ ವಾತಾವರಣ ಕಂಡುಬAದಿತು. ಮುಖ್ಯಅತಿಥಿಗಳಾಗಿ ಆಗಮಿಸಿದ ಶ್ರೀ ಶಶಿಲ್ ಜಿ. ನಮೋಶಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ಮನೋಭಿಲಾಷೆ, ಗುರಿ ಇಟ್ಟುಕೊಂಡರೆ ಐ.ಎ.ಎಸ್, ಐ.ಪಿ.ಎಸ್, ಮುಖ್ಯಮಂತ್ರಿ, ಪ್ರಧಾನಮಂತ್ರಿ ಎನಾದರು ಆಗಬಹುದು. ಅದಕ್ಕಾಗಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧಿಸಬೇಕೆಂದು ಹೇಳಿದರು. ಕಾಲೇಜಿನ ವಾತಾವರಣ, ಸಡಗರ, ಸಂಭ್ರಮ ನೋಡಿ ಖುಷಿಪಟ್ಟರು.
ಡಾ. ವಿಶಾಲದತ್ತ ವಿ. ಕೋಹಿರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಮುಂದೆ ಗುರಿ, ಹಿಂದೆ ಗುರುವಿದ್ದರೇ ಯಾವ ಸಾಧನೆಯಾದರೂ ಮಾಡಬಹುದು. ಗುರುಗಳ ಮೇಲೆ ವಿಶ್ವಾಸವಿದ್ದರೆ, ಗುರಿ ಸಾಧನೆ ಸುಲಭವಾಗುತ್ತದೆ. ಶಿಕ್ಷಕರು, ಸಹಪಾಟಿಗಳು, ಸ್ವಪ್ರಯತ್ನ ಹಾಗೂ ಪರಿಸರ ಈ ಎಲ್ಲಾ ಮಜಲುಗಳ ಸಹಕಾರದಿಂದ ಶತ ಪ್ರತಿಶತ ಸಾಧನೆ ಮಾಡಬಹುದು ಎಂದು ಕಿವಿಮಾತು ಹೇಳಿದರು. ನನ್ನ ೩೫ ವರ್ಷಗಳ ಸೇವಾ ಅವಧಿಯಲ್ಲಿ ಡಾ. ಭುರ್ಲಿ ಪ್ರಹ್ಲಾದ ಅವರು ಇಂದು ನನಗೆ ನೀಡಿದ ಸನ್ಮಾನ ನನ್ನ ಜೀವಮಾನದಲ್ಲೇ ಅತ್ಯಂತ ಅಮೂಲ್ಯವಾದ ಕ್ಷಣ ಎಂದು ಭಾವುಕರಾದರು.
ಸಂಸ್ಥೆಯ ಸದಸ್ಯರು ಹಾಗೂ ಪ್ರಾಚಾರ್ಯರಾದ ಡಾ. ಭುರ್ಲಿ ಪ್ರಹ್ಲಾದ ಅವರು ಮಾತನಾಡುತ್ತಾ ಕಠಿಣ ಪರಿಶ್ರಮ, ಸಮಯಪ್ರಜ್ಞೆ , ಇಚ್ಛಾಶಕ್ತಿ ವಿದ್ಯಾರ್ಥಿಗಳು ಮೈಗೂಡಿಸಿಕೊಂಡಾಗ ಅವರ ಸಾಧÀನೆಯ ಹಾದಿ ಸುಗಮವಾಗುತ್ತದೆ. ಈ ನಮ್ಮ ಕಾಲೇಜಿನಲ್ಲಿ ಪ್ರಥಮ ವರ್ಷದ ವಿಜ್ಞಾನ ವಿದ್ಯಾರ್ಥಿಗಳ ಸ್ವಾಗತ ಉತ್ಸವದಲ್ಲಿ ಸರ್ವ ಉಪನ್ಯಾಸಕರು, ಸಿಬ್ಬಂಧಿಗಳು ಎರಡು ದಿನಗಳ ಕಾಲ ಸತತ ಕಾರ್ಯ ನಿರ್ವಹಿಸಿ ಕಾಲೇಜಿನ ವಾತಾವರಣ ಸುಂದರಗೊಳಿಸಲು ಶ್ರಮ ಪಟ್ಟಿದ್ದಾರೆ. ನಗರದಲ್ಲಿ ನಮ್ಮ ಕಾಲೇಜು ಒಂದು ಮಾದರಿ ಎನಿಸಿಕೊಂಡಿದೆ. ಇದಕ್ಕೆ ಸರ್ವರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಹಂಚಿಕೊAಡು ವಿಷಯವಾರು ಉಪನ್ಯಾಸಕ ವೃಂದವನ್ನು ಪರಿಚಯಿಸಿಕೊಟ್ಟರು.
ಉಪ ಪ್ರಾಚಾರ್ಯ ಕೇದಾರ ದೀಕ್ಷಿತ್ ನಿರೂಪಣೆಯನ್ನು ನಡೆಸಿಕೊಟ್ಟರು. ಆಂಗ್ಲ ಭಾಷೆ ಉಪನ್ಯಾಸಕರಾದ ಸಂತೋಷ ಮಠಪತಿ ಅವರು ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕರಾದ ಮಳೇಂದ್ರ ಹಿರೇಮಠ ವಂದಿಸಿದರು. ವಿದ್ಯಾರ್ಥಿಗಳಿಗೆ ಉಪನ್ಯಾಸಕ, ಸಿಬ್ಬಂದಿ ಬಳಗದ ವತಿಯಿಂದ ಕೂಡ ಸಿಹಿ ವಿತರಿಸಲಾಯಿತು. ರಾಷ್ಟçಗೀತೆಯೊಂದಿಗೆ ಸಮಾರಂಭ ಮುಕ್ತಾಯಗೊಳಿಸಲಾಯಿತು.






























