
ಕಲಬುರಗಿ:ಮೊದಲ ಬಾರಿಗೆ ಸಚಿವಸ್ಥಾನ ದೊರಕಿರುವ ಸಂಭ್ರಮದಲ್ಲಿರುವ ಡಾ. ಅಜಯ್ ಧರ್ಮಸಿಂಗ್ ಅವರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು, ಜೇವರ್ಗಿ ಜನತೆಗೆ ಧನ್ಯವಾದ ತಿಳಿಸಿದ್ದಾರೆ.
ಹೇಳಿಕೆ ನೀಡಿರುವ ಡಾ. ಅಜಯ್ ಸಿಂಗ್ ಅವರು ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಾ. ಮಲ್ಲಿಕಾರ್ಜುನ ಖರ್ಗೆ, ರಣದೀಪಸಿಂಗ್ ಸುರ್ಜೇವಾಲ್, ಕೆಸಿ ವೇಣುಗೋಪಾಲ್, ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಬಿಕೆ ಹರಿಪ್ರಸಾದ್, ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕಲಬುರಗಿ ಜನತೆ, ಯಡ್ರಾಮಿ ಸೇರಿದಂತೆ ಜೇವರ್ಗಿ ಮತಕ್ಷೇತ್ರದ ಸರ್ವ ಜನತೆಗೂ ಧನ್ಯವಾದಗಳನ್ನು ತಿಳಿಸೋದಾಗಿ ಹೇಳಿದ್ದಾರೆ.
ತಮ್ಮ ತಂದೆಯವರಾದ ದಿ. ಧರಂಸಿಂಗ್, ತಾಯಿಯವರಾದ ಪ್ರಭಾತಿ ಧರ್ಮಸಿಂಗ್, ಬಧುಗಲಿಗೆಲ್ಲರಿಗೂ ಈ ಸಂದರ್ಭದಲ್ಲಿ ಧನ್ಯವಾದ ಹೇಳಿರುವ ಡಾ. ಅಜಯ್ ಸಿಂಗ್ ಪಕ್ಷ ಕೊಟ್ಟಿರುವ ಜವಾಬ್ದಾರಿ ಗುರುತರವಾಗಿದ್ದು ಅದನ್ನು ಬರುವ ದಿನಗಳಲ್ಲಿ ಸಮರ್ಥವಾಗಿ ನಿಭಾಯಿಸೋದಾಗಿ ಹೇಳಿದ್ದಾರೆ.































