
ಭಾಲ್ಕಿ:ಜು.೧೩: ನಗರದಲ್ಲಿ ಈ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ಬೀದರ್ ಜಿಲ್ಲಾ ಮಟ್ಟದ ತೃತೀಯ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೋ.ಮಲ್ಲಮ್ಮ ಆರ್ ಪಾಟೀಲ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ನಗರದ ಲೆಕ್ಚರ್ ಕಾಲೋನಿಯ ಸಮ್ಮೇಳನದ ಸರ್ವಾಧ್ಯಕ್ಷೆ ಮಲ್ಲಮ್ಮ ಆರ್ ಪಾಟೀಲ್ ಅವರ ನಿವಾಸಕ್ಕೆ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಭೇಟಿ ನೀಡಿ ಅವರನ್ನು ಪೇಟ, ಶಾಲು ಹೊದಿಸಿ ಸನ್ಮಾನಿಸುವುದರ ಜತೆಗೆ ಹಣ್ಣಿನ ಬುಟ್ಟಿ ನೀಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿAಗ ಕಾಮಣ್ಣ, ಕಸಾಪ ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ್, ತಾಲೂಕು ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗುಂಡಪ್ಪ ಸಂಗಮಕರ್, ಪ್ರಮುಖರಾದ ಬಾಬುರಾವ ಖ್ಯಾಡೆ, ರೇಖಾಬಾಯಿ ಅಷ್ಟೂರೆ, ಶೈಲಜಾ ಶಿವಕುಮಾರ ನಾರಾ, ಪಾರ್ವತಿ ಧುಮ್ಮನಸೂರೆ, ಗೀತಾ ಗಂಗಾ ಪಾಟೀಲ್, ವಿಧ್ಯಾವತಿ ಹಲಂಗೆ, ಶೃತಿ ಪಾಟೀಲ್, ರೇಖಾಬಾಯಿ ಜೋತೆಪ್ಪ, ವಿಜಯಲಕ್ಷ್ಮಿ ಹೊಸಾಳೆ, ಲಕ್ಷ್ಮಿ ಬಿರ್ಗೆ, ಸಿದ್ರಾಮ ಕುಡೈ, ಐಜಿಕ ಬಂಗಾರೆ, ಮಲ್ಲಿಕಾರ್ಜುನ ಪಾಟೀಲ್, ರಮೇಶ ಮಾನಶೆಟ್ಟೆ ಸೇರಿದಂತೆ ಹಲವರು ಇದ್ದರು.
































