
ಕಲಬುರಗಿ: ನೆಲದ ಹೆಮ್ಮೆಯ ಅಂತಾರಾಷ್ಟ್ರೀಯ ಖ್ಯಾತ ಚಿತ್ರ ಕಲಾವಿದ ಡಾ.ರೆಹಮಾನ್ ಪಟೇಲ್ ಅವರು ರಚಿಸಿದ ಸುರಪುರ ಸಂಸ್ಥಾನದ ಬಗ್ಗೆ ಚಿತ್ರ ಕಲಾಕೃತಿಯನ್ನು ರಾಷ್ಟ್ರಪತಿ ಭವನದಲ್ಲಿ ಶಾಶ್ವತವಾಗಿ ಸ್ಥಾಪಿಸುವ ಮೂಲಕ ಕಲಬುರಗಿ ಜಿಲ್ಲೆ ಮತ್ತು ಕಕ ಭಾಗದ ಕೀರ್ತಿಯನ್ನು ದೇಶದಾದ್ಯಂತ ಪಸರಿಸಿದ್ದಾರೆ.
ಘನತೆವೆತ್ತ ಮಾನ್ಯ ರಾಷ್ಟ್ರಪತಿ ಅವರಿಂದ ಸುವರ್ಣವುಳ್ಳ ಸ್ಮರಣಿಕೆಯನ್ನು ಸ್ವೀಕರಿಸಿದ್ದರ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ನಗರದ ಆಳಂದ ರಸ್ತೆಯ ಖಾದ್ರಿ ಚೌಕದಲ್ಲಿನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ಇಂದು ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ಡಾ.ರೆಹಮಾನ್ ಪಟೇಲ್ ಅವರನ್ನು ಸತ್ಕರಿಸಿ, ಅಭಿನಂದಿಸಲಾಯಿತು. ಎಚ್.ಬಿ.ಪಾಟೀಲ, ಶಿವಯೋಗೆಪ್ಪಾ ಎಸ್. ಬಿರಾದಾರ, ವಿಶ್ವನಾಥ ಬಕರೆ, ನವಾಬ್ ಖಾನ್, ಅಸ್ಲಾಂ ಶೇಖ್, ಡಾ.ರಾಜಶೇಖರ ಪಾಟೀಲ, ಡಾ.ಅಯಾಜುದ್ದೀನ್ ಪಟೇಲ್, ಪಂಡಿತರಾವ ಪಾಟೀಲ, ಓಂಕಾರ ವಠಾರ, ಸೈಯದ್ ಹಮೀದ್, ರಾಜಶೇಖರ ಚಿಂಚೋಳಿ, ಬಾಬಾ ಫಕ್ರುದ್ದೀನ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.






























