Home ಮುಖಪುಟ ಸುದ್ದಿ ನಕಲಿ ಓಸಿ-ಸಿಸಿ ಹಗರಣ:ಲೋಕಾ, ಇಡಿಗೆ ರಮೇಶ್ ದೂರು

ನಕಲಿ ಓಸಿ-ಸಿಸಿ ಹಗರಣ:ಲೋಕಾ, ಇಡಿಗೆ ರಮೇಶ್ ದೂರು

ಬೆಂಗಳೂರು.ಮೇ. ೧೬- ಮಹಾನಗರದಲ್ಲಿ ಕಳೆದ ೧೬ ವರ್ಷಗಳಲ್ಲಿ ನಿರ್ಮಾಣಗೊಂಡಿರುವ ಬೃಹತ್ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಶೇ.೯೫ ಕ್ಕೂ ಹೆಚ್ಚು ಕಟ್ಟಡಗಳಿಗೆ ನಕಲಿ ಅಅ ಮತ್ತು ಓಸಿ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ೪೦ ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಮತ್ತು ಸುಮಾರು ೨೨ ಲಕ್ಷ ಗ್ರಾಹಕರ ವಂಚನೆ ನಡೆದಿದೆ ಎಂದು ಬಿಜೆಪಿ ಮುಖಂಡ ಎನ್ ಅರ್ ರಮೇಶ್ ಲೋಕಾಯುಕ್ತ ಹಾಗೂ ಇಡಿಗೆ ದೂರು ನೀಡಿದ್ದಾರೆ.


ಪಾಲಿಕೆಯ ನಗರ ಯೋಜನೆ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಕಳೆದ ೧೬ ವರ್ಷಗಳಲ್ಲಿ ಕೇವಲ ೪,೩೮೧ ಸಿಸಿ ಹಾಗೂ ೪,೫೮೭ಕಟ್ಟಡಗಳಿಗೆ ಓಸಿ ಮಾತ್ರ ನೀಡಲಾಗಿದೆ. ಆದರೆ ಇದೇ ಅವಧಿಯಲ್ಲಿ ೭೧,೧೬೯ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲಾಗಿದೆ ಎಂದು ಹೇಳಲಾಗಿದೆ.


ಇದಕ್ಕೆ ವಿರುದ್ಧವಾಗಿ, ಅಖಇಆಂI ಮತ್ತು ಃಖಂI ಸದಸ್ಯರಾಗಿರುವ ೪೩೭ ಬಿಲ್ಡರ್ ಸಂಸ್ಥೆಗಳು ಮಾತ್ರವೇ ೫೦ ಕ್ಕೂ ಹೆಚ್ಚು ಯೂನಿಟ್‌ಗಳನ್ನು ಹೊಂದಿರುವ ಸುಮಾರು ೨೫ ಸಾವಿರಕ್ಕೂ ಅಧಿಕ ವಸತಿ ಸಂಕೀರ್ಣಗಳನ್ನು ನಿರ್ಮಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವಸತಿ ಸಂಕೀರ್ಣಗಳಲ್ಲಿ ಅಂದಾಜು ೨೨ ಲಕ್ಷ ಫ್ಲಾಟ್‌ಗಳಿದ್ದು, ಬಹುತೇಕ ಗ್ರಾಹಕರು ನಕಲಿ ದಾಖಲೆಗಳ ಆಧಾರದಲ್ಲಿ ಫ್ಲಾಟ್ ಖರೀದಿಸಿ ಮೋಸಕ್ಕೊಳಗಾಗಿದ್ದಾರೆ ಎಂದು ಆರೋಪಿಸಲಾಗಿದೆ.


ಬೆಂಗಳೂರು ವ್ಯಾಪ್ತಿಯಲ್ಲಿ ೯೮ ಟೆಕ್ ಪಾರ್ಕ್‌ಗಳು, ೩,೮೭೬ Iಖಿ ಕಂಪನಿಗಳು, ೧೦೩ ಃಖಿ ಕಂಪನಿಗಳು, ೪,೫೦೦ ಕ್ಕೂ ಹೆಚ್ಚು ವಾಣಿಜ್ಯ ಸಂಕೀರ್ಣಗಳು, ೨೧೭ ಮಾಲ್ ಮತ್ತು ಮಲ್ಟಿಪ್ಲೆಕ್ಸ್‌ಗಳು, ೧.೧೦ ಲಕ್ಷ ಕೈಗಾರಿಕಾ ಕಟ್ಟಡಗಳು, ೫೪೦ ಸ್ಟಾರ್ ಹೋಟೆಲ್‌ಗಳು, ೨,೮೫೦ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ ೧,೩೫೦ ಕಲ್ಯಾಣ ಮಂಟಪಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿಯೂ ಬಹುಪಾಲು ಕಟ್ಟಡಗಳಿಗೆ ನಕಲಿ ಔಅ-ಅಅ ನೀಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ನಗರ ಯೋಜನೆ ಇಲಾಖೆಯ ಅಧಿಕಾರಿಗಳು ಹಾಗೂ ಬಿಲ್ಡರ್ ಮಾಫಿಯಾ ನಡುವೆ ಶಾಮೀಲಾತಿ ನಡೆದು, ಕಾನೂನುಬದ್ಧ ಶುಲ್ಕದ ಬದಲು ಅದರ ಶೇ.೨೫ ರಷ್ಟು ಹಣವನ್ನು ಲಂಚ ರೂಪದಲ್ಲಿ ಪಡೆದು ನಕಲಿ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಕಾರಣದಿಂದ ಃಃಒP/ಉಃಂ ಗೆ ಕಳೆದ ೧೬ ವರ್ಷಗಳಲ್ಲಿ ೪೦ ಸಾವಿರ ಕೋಟಿ ಕ್ಕೂ ಹೆಚ್ಚು ಆದಾಯ ನಷ್ಟವಾಗಿದೆ ಎಂದು ಹೇಳಲಾಗಿದೆ.


೨೦೧೭-೧೮ ರಲ್ಲಿ ರಾಜರಾಜೇಶ್ವರಿ ನಗರ ವಲಯದಲ್ಲಿ ನಕಲಿ ಔಅ-ಅಅ ಮುದ್ರಣ ಪ್ರಕರಣದಲ್ಲಿ ಆರು ಮಂದಿ ಪಾಲಿಕೆ ನೌಕರರನ್ನು ಃಒಖಿಈ ಪೊಲೀಸರು ಬಂಧಿಸಿದ್ದರು ಎಂಬುದನ್ನೂ ಉಲ್ಲೇಖಿಸಲಾಗಿದೆ.


ನಗರ ಯೋಜನೆ ಇಲಾಖೆಯಲ್ಲಿ ಹುದ್ದೆಗಳಿಗೆ ಲಕ್ಷಾಂತರದಿಂದ ಕೋಟ್ಯಂತರ ರೂಪಾಯಿ ಲಂಚ ನೀಡಿ ನೇಮಕವಾಗುವ ಅಧಿಕಾರಿಗಳು ಬಳಿಕ ಅಕ್ರಮ ಮಾರ್ಗದಲ್ಲಿ ಅಪಾರ ಆಸ್ತಿ ಸಂಪಾದಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರೆ.


ಈ ಸಂಬಂಧ ೨೫೫ ಮಂದಿ ಅಧಿಕಾರಿಗಳು ಹಾಗೂ ಅಖಇಆಂI ಮತ್ತು ಃಖಂIಗೆ ಸೇರಿದ ೪೩೭ ಬಿಲ್ಡರ್‌ಗಳ ವಿರುದ್ಧ ೯,೭೦೦ ಪುಟಗಳ ದಾಖಲೆಗಳೊಂದಿಗೆ ಜಾರಿ ನಿರ್ದೇಶನಾಲಯ (ಇಆ) ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಜೊತೆಗೆ, ಈ ಸಂಪೂರ್ಣ ಹಗರಣವನ್ನು ಅಃI ಅಥವಾ ಅIಆ ತನಿಖೆಗೆ ಒಪ್ಪಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ.