
ಜೇವರ್ಗಿ : ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಏಸಿ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಅಡಿಯಲ್ಲಿ ನಡೆದ ಮೂರು ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪೆÇ್ರ. ಶಾಂತಾ ಅಸ್ಟಿಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯ ಎಷ್ಟು ಅವಶ್ಯವೋ ಪಠ್ಯೇತರ ಚಟುವಟಿಕೆಗಳು ಕೂಡಾ ಅಷ್ಟೇ ಮುಖ್ಯ. ಅಂಚಿಗೆ ತಳ್ಳಲ್ಪಟ್ಟ ಜನಗಳ ಸೇವೆ ಮಾಡುವದು ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ರಾಯಚೂರಿನ ವೈ. ನರಸಿಂಹ ಮಾತನಾಡಿ ವಿದ್ಯಾರ್ಥಿಗಳು ರೋವರ್ಸ್ ರೇಂಜರ್ ಸಂಸ್ಥೆಯ ತತ್ವ ಸಿದ್ಧಾಂತಗಳನ್ನು ತಿಳಿದು, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿ ಕಾರ್ಯದರ್ಶಿ ಡಾ. ಖಾಜಾವಲಿ ಈಚನಾಳ, ಐಕ್ಯುಏಸಿ ಸಂಯೋಜಕ ಡಾ. ಸಂದೀಪ್ ತಿವಾರಿ ಉಪಸ್ಥಿತರಿದ್ದರು. ರೇಂಜರ್ಸ್ ಲೀಡರ್ ಭಾಗ್ಯಶ್ರೀ ಸ್ವಾಗತಿಸಿದರು. ರೋವರ್ಸ್ ಲೀಡರ್ ಡಾ. ರಾಮುಲು ವರದಿ ವಾಚಿಸಿದರು. ಅಪರ್ಣಾ ನಿರೂಪಿಸಿದರೆ, ಡಾ. ಖುತೇಜಾ ನಸ್ರಿನ್ ವಂದಿಸಿದರು. ಶಿಬಿರಾರ್ಥಿಗಳಾದ ಲಕ್ಷ್ಮೀ, ವಿಶ್ವನಾಥ ಬಿರಾದಾರ, ಸ್ವಪ್ನಾ, ಪದ್ಮಣ್ಣ ಅನಿಸಿಕೆ ವ್ಯಕ್ತಪಡಿಸಿದರು.ಶಿಬಿರದ ಕೊನೆಯ ದಿನ ಪಟ್ಟಣದ ಬಸ್ ನಿಲ್ದಾಣಕ್ಕೆ ತೆರಳಿ ಸಾರ್ವಜನಿಕರಿಗೆ ರೋವರ್ಸ್ ರೇಂಜರ್ಸ್ ಬಗ್ಗೆ ಜಾಗೃತಿ ಮೂಡಿಸ ಲಾಯಿತು, ಲಕ್ಷ್ಮೀದೇವಸ್ಥಾನ ದಲ್ಲಿ ಸ್ವಚ್ಛತಾ ಕಾರ್ಯ ಕೆ?ಗೊಳ್ಳಲಾಯಿತು.























