
ನವದೆಹಲಿ,ಮೇ೧೬- ಭಾರತದ ರಕ್ಷಣಾ ಉತ್ಪಾದನಾ ವಲಯದಲ್ಲಿ ಶೀಘ್ರದಲ್ಲೇ ಒಂದು ಮಹತ್ತರ ಮೈಲಿಗಲ್ಲು ಸ್ಥಾಪನೆಯಾಗಲಿದೆ. ಗುಜರಾತ್‌ನ ವಡೋದರಾದಲ್ಲಿರುವ ‘ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್’ ಘಟಕದಲ್ಲಿ ದೇಶೀಯವಾಗಿ ಜೋಡಿಸಲಾದ ಮೊದಲ ‘ಮೇಡ್ ಇನ್ ಇಂಡಿಯಾ’ ಸಿ೨೯೫ ಮಿಲಿಟರಿ ಸಾರಿಗೆ ವಿಮಾನವು ಶೀಘ್ರದಲ್ಲೇ ರೋಲ್-ಔಟ್ (ಹೊರತರಲು) ಆಗಲು ಸಿದ್ಧವಾಗಿದೆ.
ಈ ಮೂಲಕ ದಶಕಗಳಿಂದ ರಕ್ಷಣಾ ವಿಮಾನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ ಏಕಸ್ವಾಮ್ಯಕ್ಕೆ ಬ್ರೇಕ್ ಬಿದ್ದಂತಾಗಿದ್ದು, ಖಾಸಗಿ ವಲಯದ ಬೃಹತ್ ಹೆಜ್ಜೆಗೆ ನಾಂದಿ ಹಾಡಿದೆ.
ಇತ್ತೀಚೆಗೆ ಈ ವಿಮಾನವನ್ನು ಹ್ಯಾಂಗರ್‌ನಿಂದ ಹೊರಗೆ ತರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಯೋಜನೆ ಪ್ರಗತಿ ಸಾಧಿಸಿರುವುದನ್ನು ಸೂಚಿಸುತ್ತಿದೆ. ಶುಕ್ರವಾರವಷ್ಟೇ ಏರ್ ಮಾರ್ಷಲ್ ಎ.ಕೆ. ಭಾರತಿ ಅವರು ವಡೋದರಾ ಘಟಕಕ್ಕೆ ಭೇಟಿ ನೀಡಿ, ವಿಮಾನದ ಮೊದಲ ಹಾರಾಟದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಏನಿದು ಯೋಜನೆ?
೨೦೨೧ ರಲ್ಲಿ ಕೇಂದ್ರ ಸರ್ಕಾರವು ಏರ್‌ಬಸ್ ಸಂಸ್ಥೆಯೊಂದಿಗೆ ಸುಮಾರು ೨೧,೯೩೫ ಕೋಟಿ ವೆಚ್ಚದ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರ ಅನ್ವಯ ಒಟ್ಟು ೫೬ ವಿಮಾನಗಳನ್ನು ಭಾರತೀಯ ವಾಯುಪಡೆಗೆ (Iಂಈ) ಸೇರ್ಪಡೆಗೊಳಿಸಲಾಗುವುದು. ಮೊದಲ ೧೬ ವಿಮಾನಗಳು ಸ್ಪೇನ್‌ನಿಂದ ನೇರವಾಗಿ ಹಾರಾಟದ ಸ್ಥಿತಿಯಲ್ಲಿ ಭಾರತಕ್ಕೆ ಬಂದಿಳಿದಿದ್ದು, ಉಳಿದ ೪೦ ವಿಮಾನಗಳನ್ನು ಟಾಟಾ ಸಂಸ್ಥೆಯು ಭಾರತದಲ್ಲೇ ಸಂಪೂರ್ಣವಾಗಿ ತಯಾರಿಸುತ್ತಿದೆ. ಈ ವಿಮಾನದ ಶೇ. ೮೫ ಕ್ಕಿಂತ ಹೆಚ್ಚು ಭಾಗ ಹಾಗೂ ಅಂತಿಮ ಜೋಡಣೆ ಭಾರತದಲ್ಲೇ ನಡೆಯುತ್ತಿರುವುದು ವಿಶೇಷ.
ಪ್ರಸ್ತುತ ವಾಯುಪಡೆಯಲ್ಲಿರುವ ಹಳೆಯದಾದ ‘ಅವೇರೋ-೭೪೮’ ವಿಮಾನಗಳ ಜಾಗವನ್ನು ಈ ಆಧುನಿಕ ಟ್ವಿನ್-ಟರ್ಬೋಪ್ರೊಪ್ ತಂತ್ರಜ್ಞಾನದ ಅ೨೯೫ ವಿಮಾನಗಳು ತುಂಬಲಿವೆ. ಇದು ವಾಯುಪಡೆಯ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲಿದೆ:ರನ್‌ವೇ ಮಿತಿ ಇಲ್ಲ: ಕೇವಲ ೩೨೦ ರಿಂದ ೬೭೦ ಮೀಟರ್‌ನಷ್ಟು ಚಿಕ್ಕದಾದ ಮತ್ತು ಕಚ್ಚಾ ರನ್‌ವೇಗಳಲ್ಲೂ ಇದು ಸುಲಭವಾಗಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಮಾಡಬಲ್ಲದು.ಭಾರ ಹೊರುವ ಸಾಮರ್ಥ್ಯ: ಇದು ೯.೫ ಟನ್ ಸರಕು, ೭೦ ಸೈನಿಕರು ಅಥವಾ ೪೮ ಪ್ಯಾರಾಟ್ರೂಪರ್‌ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.ಹಿಂಭಾಗದ ರಾಂಪ್ ಸೌಲಭ್ಯ: ಹಳೆಯ ಆವ್ರೊ ವಿಮಾನಗಳಂತೆ ಬದಿಯ ಬಾಗಿಲುಗಳ ಬದಲಿಗೆ, ಇದರ ಹಿಂಭಾಗದಲ್ಲಿ ದೊಡ್ಡ ರಾಂಪ್ ಇದ್ದು, ಸಣ್ಣ ಫಿರಂಗಿಗಳು ಮತ್ತು ಲಘು ವಾಹನಗಳನ್ನು ಸುಲಭವಾಗಿ ಲೋಡ್-ಅನ್‌ಲೋಡ್ ಮಾಡಬಹುದು.
ಜಮ್ಮು-ಕಾಶ್ಮೀರ, ಲಡಾಖ್‌ನ ದೌಲತ್ ಬೇಗ್ ಓಲ್ಡಿ (೧೬,೭೦೦ ಅಡಿ ಎತ್ತರ) ಹಾಗೂ ಈಶಾನ್ಯ ಭಾರತದ ಅತ್ಯಂತ ಕಠಿಣ ಗಡಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಇದು ಅತ್ಯಂತ ಸೂಕ್ತವಾಗಿದೆ.ಅಮೆರಿಕದ ವಾಯುಪಡೆಯು ಇರಾನ್‌ನಿಂದ ತನ್ನ ಪೈಲಟ್‌ಗಳನ್ನು ರಕ್ಷಿಸುವಂತಹ ಅತ್ಯಂತ ಕಠಿಣ ಕಾರ್ಯಾಚರಣೆಗಳಲ್ಲಿ ಇದೇ ಮಾದರಿಯ ವಿಮಾನವನ್ನು ಬಳಸಿತ್ತು. ಜಗತ್ತಿನಾದ್ಯಂತ ೩೬ ಕ್ಕೂ ಹೆಚ್ಚು ದೇಶಗಳು ಇದನ್ನು ಬಳಸುತ್ತಿದ್ದು, ಇದು ನಂಬಿಕಸ್ಥ ಯುದ್ಧವಿಮಾನವಾಗಿದೆ. ಭಾರತದಲ್ಲಿರುವ ಬೃಹತ್ ‘ಅ-೧೭ ಗ್ಲೋಬ್‌ಮಾಸ್ಟರ್’ ಆಯಕಟ್ಟಿನ ಮತ್ತು ದೊಡ್ಡ ಸರಕು ಸಾಗಣೆಗೆ ಬಳಕೆಯಾದರೆ, ಈ ಅ೨೯೫ ವಿಮಾನವು ಕಿರಿದಾದ ಮತ್ತು ಕಠಿಣ ಗುಡ್ಡಗಾಡು ಪ್ರದೇಶಗಳಿಗೆ ಕ್ಷಿಪ್ರವಾಗಿ ಸೈನಿಕರನ್ನು ಹಾಗೂ ಸಾಮಗ್ರಿಗಳನ್ನು ತಲುಪಿಸಲು ಪೂರಕವಾಗಿ ಕೆಲಸ ಮಾಡಲಿದೆ.
ಈ ಯೋಜನೆಯು ನಮ್ಮ ರಕ್ಷಣಾ ಕೈಗಾರಿಕಾ ಸಹಭಾಗಿತ್ವದ ಆಳ ಮತ್ತು ಸ್ಥಿತಿಸ್ಥಾಪಕ ಉತ್ಪಾದನಾ ಸಾಮರ್ಥ್ಯವನ್ನು ನಿರ್ಮಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿದೇಶಾಂಗ ಸಚಿವಎಸ್. ಜೈಶಂಕರ್ ತಿಳಿಸಿದ್ದಾರೆ.
ಈ ಮೆಗಾ ಯೋಜನೆಯಿಂದಾಗಿ ಭಾರತದ ಸಣ್ಣ ಮತ್ತು ಮಧ್ಯಮ ಗಾತ್ರದ ಸುಮಾರು ೩೭ ಕೈಗಾರಿಕೆಗಳು ಪೂರೈಕೆದಾರರಾಗಿ ಕೈಜೋಡಿಸಿವೆ. ವಡೋದರಾ ಘಟಕವೊಂದರಲ್ಲೇ ನೇರವಾಗಿ ೩,೦೦೦ ಕ್ಕೂ ಹೆಚ್ಚು ತಾಂತ್ರಿಕ ಉದ್ಯೋಗಗಳು ಸೃಷ್ಟಿಯಾಗಲಿವೆ. ಬಿಡಿಭಾಗಗಳ ತಯಾರಿಕೆಯಿಂದ ಹಿಡಿದು ಇಂಜಿನ್ ಜೋಡಣೆ, ಪರೀಕ್ಷೆ ಮತ್ತು ನಿರ್ವಹಣೆಯನ್ನು ಟಾಟಾ ಸಂಸ್ಥೆಯೇ ನಿರ್ವಹಿಸುತ್ತಿರುವುದರಿಂದ, ಭವಿಷ್ಯದಲ್ಲಿ ಭಾರತವು ಈ ರಕ್ಷಣಾ ವಿಮಾನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಜಾಗತಿಕ ಹಬ್ ಆಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳಿವೆ.























