
ನಗರದ ವಿಜಯಾಬ್ಯಾಂಕ್ ಲೇ ಔಟ್ ವಾರ್ಡಿನಲ್ಲಿ ಸುಮಾರು ೫೦ ಲಕ್ಷ ರೂ.ವೆಚ್ಚದಲ್ಲಿ ರಸ್ತೆಗಳ ಡಾಂಬರೀಕರಣಕ್ಕೆ ಚಾಲನೆ ನೀಡಿದ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರಿಗೆ ವಾರ್ಡಿನ ನಾಗರೀಕರ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಜಯಾಬ್ಯಾಂಕ್ ಲೇ ಔಟ್ ನ ಅಸೋಸಿಯೇಷನ್ ನ ಸದಸ್ಯರು, ಬೊಮ್ಮನಹಳ್ಳಿ ಮಂಡಲ ಬಿಜೆಪಿ ಉಪಾಧ್ಯಕ್ಷ ಎಂ. ಮಂಜುನಾಥ್ (ಮಂಜು), ಬಿಬಿಎಂಪಿ ಮಾಜಿ ಸದಸ್ಯರಾದ ರವಿ,ಮುರುಳಿ ಹಾಗೂ ರಮೇಶ್ ಅವರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

























