Home ಮುಖಪುಟ ಸುದ್ದಿ ಇಂಧನ ಮಿತವ್ಯಯ : ಮೆಟ್ರೋದಲ್ಲಿ ಬಿವೈವಿ

ಇಂಧನ ಮಿತವ್ಯಯ : ಮೆಟ್ರೋದಲ್ಲಿ ಬಿವೈವಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಗೆ ಸ್ಪಂದಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ಮೆಜೆಸ್ಟಿಕ್ ನಿಂದ ಕೆಂಗೇರಿಯವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು. ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಇದ್ದಾರೆ.

ಬೆಂಗಳೂರು, ಮೇ. ೧೬- ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಇಂಧನ ಮಿತವ್ಯಯಕ್ಕೆ ಕರೆ ನೀಡಿದ ಬೆನ್ನಲ್ಲೇ ಅದನ್ನು ಪಾಲಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮುಂದಾಗಿದ್ದಾರೆ.


ಕಳೆದ ೨ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಇಂಧನ ಮಿತವ್ಯಯಕ್ಕೆ ದೇಶದ ಜನತೆಗೆ ಕರೆ ನೀಡಿದ್ದರು. ಸ್ವತಃ ತಾವು ಸಹ ತಮ್ಮ ಬೆಂಗಾವಲು ಪಡೆಯ ವಾಹನ ಸಂಖ್ಯೆಗಳ ಬಳಕೆಯನ್ನು ಸಹ ಕಡಿತಗೊಳಿಸಿದರು.


ಪ್ರಧಾನಿ ಮೋದಿಯವರ ಕರೆಯನ್ನು ಬೆಂಬಲಿಸುವ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಹ ತಮ್ಮ ಬೆಂಗಾವಲು ಹಾಗೂ ವಾಹನವನ್ನು ಬಳಸದೆ ಇಂಧನ ಮಿತವ್ಯಯಕ್ಕೆ ಮುಂದಾಗಿದ್ದಾರೆ.


ಇಂದು ಕುಂಬಳಗೂಡಿನಲ್ಲಿ ಕಾರ್ಯಕ್ರಮಕ್ಕೆ ಮೆಜೆಸ್ಟಿಕ್‌ನಿಂದ ಕೆಂಗೇರಿಯವರೆಗೂ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಇಂಧನ ಮಿತವ್ಯಯಕ್ಕೆ ಮುಂದಾಗಿದ್ದಾರೆ. ಹಾಗೂ ಇತರ ಬಿಜೆಪಿ ನಾಯಕರಿಗೂ ಮಾದರಿಯಾಗಿದ್ದಾರೆ.