
ಕಲಬುರಗಿ,ಮೇ 16: ನಗರದ ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆಯ, ಪದವಿ ಶಿಕ್ಷಣ ಮಹಾವಿದ್ಯಾಲಯದದಲ್ಲಿ, ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗಾಗಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಯುಕ್ತ ಆಶ್ರಯದಲ್ಲಿ ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ- ಪ್ರಜಾಪ್ರಭುತ್ವ ಉಳಿಸಿ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಯಿತು.
ಪ್ರಾಂಶುಪಾಲ ಡಾ. ವಿಜಯಕುಮಾರ. ಎನ್.ಗೋತಗಿಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ,
ಇವತ್ತು ಚುನಾವಣೆಗಳಲ್ಲಿ ಹಂಚುತ್ತಿರುವ ಹಣದಿಂದ ಮುಂದೊಂದು ದಿನ ದೇಶಕ್ಕೆ ಅಪಾಯ ಕಾದಿರುವುದು ನಿಶ್ಚಿತ ನಾವು ಚುನಾವಣೆಗಳಲ್ಲಿ ಸ್ಪರ್ಧಿಸಿ, ಹಣ ಕೊಟ್ಟು ಗೆದ್ದು ಬರುವುದು ಮತ್ತು ಚುನಾವಣೆಗಳಲ್ಲಿ ನಾವು ಹಣ ತೆಗೆದುಕೊಂಡು ಮತ ಹಾಕುವುದು ಎರಡು ನಾವು ಸ್ವಾತಂತ್ರ ಹೋರಾಟಗಾರರಿಗೆ ಸಂವಿಧಾನ ಕರ್ತರಿಗೆ ಮಾಡುತ್ತಿರುವ ಅವಮಾನ ಎಂದರು.
ವಿಚಾರ ಸಂಕೀರಣ ದಲ್ಲಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳಾದ ಗುಂಡಪ್ಪ ಎಸ್ .ಕೆ, ಗುರಪ್ಪ ಸೊನ್ನ, ಶರಣಮ್ಮ ಸುಧಾರಾಣಿ, ಸ್ವಪ್ನ ಎಂ.ಪಾಟೀಲ. ಪ್ರಶಾಂತ, ಮಹಾದೇವಿ, ಸೋನಾಲಿ, ಶಾಂತಾ, ಪ್ರೀತಿ, ಮಹೇಶ, ಮತ್ತು ಮಲ್ಲಮ್ಮ ಅತ್ಯುತ್ತಮವಾಗಿ ವಿಚಾರ ಮಂಡಿಸಿದ್ದಕ್ಕಾಗಿ ಅಭಿನಂದನಾ ಪತ್ರವನ್ನು ನೀಡಲಾಯಿತು.
ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿಯ ಸಂಸ್ಥಾಪಕರಾದ ರಮೇಶ. ಆರ್.ದುತ್ತರಗಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಡಾ.ಸೀಮಾ ಬನ್ನೂರಕರ್,ಪ್ರಾಧ್ಯಾಪಕರಾದ ಭರತಕುಮಾರ ಕುಲಕರ್ಣಿ, ಗುಂಡಪ್ಪ ಎಸ್.ಅವಂಟಿ ,ಮಹೇಶ ಜೋಷಿ, ಮಹಾದೇವ ನಿಲವಾಡೆ ಮತ್ತು ಸಾಬಯ್ಯ ಗುತ್ತೇದಾರ ಉಪಸ್ಥಿತರಿದ್ದರು.ಬಿ.ಎಡ್,ಪ್ರಶಿಕ್ಷಣಾರ್ಥಿಗಳಾದ ಶೇಖಮ್ಮ ಪ್ರಾರ್ಥನೆ ಹಾಡಿದರು.ಮಂಜುನಾಥ ಸ್ವಾಗತಿಸಿದರು.ಗುರಪ್ಪ ವಂದನಾರ್ಪಣೆ ಮಾಡಿದರು. ಸ್ವರೂಪಾ ನಿರೂಪಿಸಿದರು.























