
ಕಲಬುರಗಿ: ಶಿಕ್ಷಣಸಂಸ್ಥೆಗಳಲ್ಲಿ ಸಮವಸ್ತ್ರ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ,ಹಿಜಾಬ್‍ಗೆ ಅನುಮತಿ ನೀಡುವ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿ ಇಂದು ಶ್ರೀರಾಮಸೇನಾ ಜಿಲ್ಲಾ ಘಟಕದಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ,ಶಿವಕುಮಾರ ಸಗರ,ಅಂಬಾಜಿ ಗಣೇಶಕರ,ವೀರೇಶ ಕೋರಳ್ಳಿ, ಮಹೇಶ ಕೆಂಭಾವಿ,ಗಣೇಶ ರಾಠೋಡ್,ಪ್ರಶಾಂತ ಸಿರೂರ್ ಸೇರಿದಂತೆ ಹಲವರು ಪಾಲ್ಗೊಂಡರು.























