Home ಜಿಲ್ಲೆ ಪರಿಸರದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು : ಅರ್ಜುನವಾಡ

ಪರಿಸರದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು : ಅರ್ಜುನವಾಡ

ಅಥಣಿ : ಜೂ.೭:ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಕ್ಕಳು ತಾವು ಬೆಳೆದಂತೆ ತಾವು ನೆಟ್ಟಿರುವ ಗಿಡಗಳನ್ನೂ ಪೋಷಿಸಿ ಉಳಿಸಬೇಕು. ಪರಿಸರ ಉಳಿದರೆ ಜೀವ ಸಂಕುಲಕ್ಕೆ ಉಳಿಗಾಲವಿದೆ. ಆದ್ದರಿಂದ ಪರಿಸರದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ರಾಕೇಶ್ ಅರ್ಜುನವಾಡ ಹೇಳಿದರು.
ಅವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಅನಂತಪುರ ರಸ್ತೆಗೆ ಹೊಂದಿಕೊAಡಿರುವ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ವಿಮೋಚನಾ ಸಂಸ್ಥೆ, ಪ್ರಾದೇಶಿಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ೧೦೦ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ಗಿಡ-ಮರಗಳನ್ನು ಬೆಳೆಸುವುದರಿಂದ ಗಾಳಿಯ ಗುಣಮಟ್ಟ ಸುಧಾರಿಸುತ್ತದೆ ಶುದ್ಧವಾದ ಆಕ್ಸಿಜನ್ ಸಿಗುತ್ತದೆ ಮತ್ತು ಜೀವವೈವಿಧ್ಯಕ್ಕೆ ಆಸರೆಯಾಗುತ್ತದೆ. ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಸುಂದರ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ನಾವೆಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್. ಪಾಟೀಲ ಮಾತನಾಡಿ ನೀವು ಕೇವಲ ಗಿಡಗಳನ್ನು ನೆಡುತ್ತಿಲ್ಲ, ಮಕ್ಕಳ ಭವಿಷ್ಯವನ್ನೂ ಬೆಳೆಸುತ್ತಿದ್ದೀರಿ. ಇಂದು ನೆಡಲಾಗುತ್ತಿರುವ ಈ ಗಿಡಗಳು ಮಕ್ಕಳು ತಮ್ಮ ಶಿಕ್ಷಣ ಪೂರ್ಣಗೊಳಿಸುವ ವೇಳೆಗೆ ಸೊಬಗಿನ ಅರಣ್ಯದಂತೆ ಬೆಳೆದು ನಿಲ್ಲಬೇಕು. ಪರಿಸರ ಸಂರಕ್ಷಣೆ ಮತ್ತು ಶಿಕ್ಷಣ ಎರಡೂ ಸಮಾಜದ ಅಭಿವೃದ್ಧಿಗೆ ಅವಶ್ಯಕವಾಗಿವೆ ಎಂದು ತಿಳಿಸಿದರು
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ಕಾನಿಪ ಸಂಘದ ತಾಲೂಕು ಅಧ್ಯಕ್ಷ ರಾಕೇಶ ಮೈಗೂರ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಕೇವಲ ಜೂನ್ ೫ ಕ್ಕೆ ಮಾತ್ರ ಸೀಮಿತವಾಗಬಾರದು. ಪರಿಸರ ನಮಗೆ ಶುದ್ಧ ಗಾಳಿ, ಆಮ್ಲಜನಕ ಹಾಗೂ ಉತ್ತಮ ವಾತಾವರಣ ಜೀವನವನ್ನು ನೀಡುತ್ತದೆ. ಆದ್ದರಿಂದ ಪರಿಸರವನ್ನು ಬೆಳೆಸಿ ಉಳಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು” ಎಂದು ಹೇಳಿದರು.
ಆನಂತರ ಶಾಲೆಯ ಆಡಳಿತಾಧಿಕಾರಿ ಸಂತೋಷ ಬಡಕಂಬಿ ಮಾತನಾಡಿ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ಮೇಲೆ ವಿಶ್ವಾಸವಿಟ್ಟು ೧೦೦ ಗಿಡಗಳನ್ನು ನೀಡಿದ್ದಾರೆ. ಅವುಗಳನ್ನು ಪೋಷಿಸಿ ಬೆಳೆಸುವುದು ನಮ್ಮ ಜವಾಬ್ದಾರಿ. ಪ್ರತಿ ಮಗುವಿಗೆ ಒಂದೊAದು ಗಿಡವನ್ನು ದತ್ತು ನೀಡಲಾಗುವುದು. ಆಯಾ ಗಿಡಗಳ ಮೇಲೆ ಮಕ್ಕಳ ಹೆಸರಿನ ಫಲಕ ಅಳವಡಿಸಿ, ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ನೀಡಿ. ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜೊತೆಗೆ ನಾವು ಸಹ ಗಿಡಗಳ ಆರೈಕೆಗೆ ವಿಶೇಷ ಗಮನ ಹರಿಸುತ್ತೇವೆ” ಎಂದು ಹೇಳಿದರು.ಈ ಸಂದರ್ಭದಲ್ಲಿ ಮಹಾದೇವ ತೋಟಗಿ, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ನಿಗಡಿ, ಮಹಾಂತೇಶ ಬಾಡಗಿ, ಮಾಜಿ ಸೈನಿಕ ಪಾಂಡುರAಗ ಕಾಂಬಳೆ. ವಿದ್ಯಾ ತೇವರಟ್ಟಿ, ಭಾರತಿ ಖಿಲಾರೆ, ಸುಧಾರಾಣಿ ಕೋರೆ, ಗೀತಾ ಕನ್ನೂರ, ಪೂರ್ಣಿಮಾ ಚೌಗಲಾ, ಎಸ್. ಎಸ್. ಗುಡೋಡಗಿ, ಶೈಲಾ ಇಂಗಳೇಶ್ವರ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.