
ಜೇವರ್ಗಿ,ಆ.24-ಸಚಿವರಾದ ನಂತರ ಮೊದಲ ಬಾರಿಗೆ ತವರು ಕ್ಷೇತ್ರಕ್ಕೆ ಆಗಮಿಸಿದ ಡಾ.ಅಜಯ್ ಸಿಂಗ್ ಅವರನ್ನು ಜೇವರ್ಗಿ-ಯಡ್ರಾಮಿ ತಾಲ್ಲೂಕಿನ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಭಾನುವಾರ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
ಅಭಿಮಾನಿಗಳು, ಕಾರ್ಯಕರ್ತರು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ನೂತನ ಸಣ್ಣ ನೀರಾವರಿ ಸಚಿವ ಡಾ.ಅಜಯ್ ಸಿಂಗ್ ಅವರಿಗಾಗಿ ಕಾದು ಸಚಿವರು ಮಧ್ಯಾಹ್ನ 3ಕ್ಕೆ ಕಟ್ಟಿಸಂಗಾವಿಗೆ ಆಗಮಿಸುತ್ತಿದ್ದಂತೆಯೇ ಬೈಕ್ ರ್ಯಾಲಿ ಮೂಲಕ ಪಟ್ಟಣಕ್ಕೆ ಸ್ವಾಗತ ಕೋರಲಾಯಿತು. ಮೆರವಣಿಗೆ ಯುದ್ದಕ್ಕೂ ಅಭಿಮಾನಿಗಳು ವಿವಿಧ ಕಲಾತಂಡಗಳ ವಾದನಕ್ಕೆ ನೃತ್ಯ ಮಾಡುತ್ತ ಸಂಭ್ರಮಿಸಿದರು.
ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್ ಎದುರು ಪಕ್ಷದ ಮುಖಂಡರು, ಕಾರ್ಯಕರ್ತರು ಸಚಿವ ಡಾ.ಅಜಯ್ ಸಿಂಗ್ ಅವರಿಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಪುಷ್ಪವೃಷ್ಟಿ ಗೈದು ಜಯಘೋಷ ಕೂಗಿದರು. ನಂತರ ಅಲ್ಲಿಂದ ಅಖಂಡೇಶ್ವರ ಸರ್ಕಲ್, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಎಪಿಎಂಸಿ ಆವರಣದವರೆಗೂ ಡಾ.ಅಜಯಸಿಂಗ್ ಅವರನ್ನು ಅದ್ದೂರಿ ಮೆರವಣಿಗೆ ಮಾಡಲಾಯಿತು. ಡೊಳ್ಳು, ಡಿಜೆ, ತಮಟೆ ವಾದನ, ಬ್ಯಾಂಜೋ ವಾದನಗಳು ಮೆರವಣಿಗೆಗೆ ರ0ಗುತಂದವು. ರಸ್ತೆಯುದ್ದಕ್ಕೂ ಕಾಂಗ್ರೆಸ್ ಧ್ವಜಗಳು, ಬ್ಯಾನರ್‍ಗಳು ರಾರಾಜಿಸಿದವು. ಅನೇಕ ಅಭಿಮಾನಿಗಳು ಡಾ.ಅಜಯ್ ಸಿಂಗ್ ಅವರಿಗೆ ಜೆಸಿಬಿ ಮುಖಾಂತರ ಪುಷ್ಪವೃಷ್ಟಿ ಗೈದು ಜಯಘೋಷ ಕೂಗಿದರು. ಕಾರ್ಯಕರ್ತರು ಬೈಕ್ ಮೂಲಕ ಪಟ್ಟಣಕ್ಕೆ ಸ್ವಾಗತ ಕೋರಿ ಕ್ರೇನ್‍ಗಳ ನೆರವಿನಿಂದ ಬೃಹತ್ ಹಾರಗಳನ್ನು ಹಾಕಿ, ಹೂವುಗಳ ಸುರಿಮಳೆಗೈದರು.
ಎಪಿಎಂಸಿ ಪ್ರಾಂಗಣದಲ್ಲಿ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಡಾ.ಅಜಯ್ ಸಿಂಗ್ ಅವರು ಕ್ಷೇತ್ರದ ಜನತೆ 1977 ರಿಂದ ಇಲ್ಲಿಯವರೆಗೆ ನಮ್ಮ ಕುಟುಂಬಕ್ಕೆ ಅಧಿಕಾರ ನೀಡಿದ್ದಾರೆ. ಹತ್ತು ಜನ್ಮ ಕಳೆದರೂ ಈ ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವಿಲ್ಲ’ ಎಂದರು.
‘ರಾಜಕೀಯದಲ್ಲಿ ನಾನು ಸಾಕಷ್ಟು ಕಾರಣಕ್ಕೆ ರಾಜ್ಯ ಪ್ರವಾಸ ಮಾಡಬೇಕಿದೆ. ಅಭಿವೃದ್ಧಿ ನಿರಂತರ ಪ್ರಕ್ರಿಯೆ, ನಿಂತ ನೀರಲ್ಲ, ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ, ಮುಂಬರುವ ಜಿಪಂ, ತಾಪಂ, ಗ್ರಾಪಂ, ಎಪಿಎಂಸಿ ಚುನಾವಣೆಗೆ ಕಾರ್ಯಕರ್ತರು ಸಿದ್ದರಾಗಬೇಕಿದೆ. ಬೆಳೆವಿಮೆ ಮಂಜೂರು ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ರೈತರ ಖಾತೆಗೆ ಹಣ ಜಮೆಯಾಗಲಿದೆ’ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ನನ್ನ ರಾಜಕೀಯ ಗುರು ಅವರು ನಡೆದ ದಾರಿಯಲ್ಲಿ ಡಾ.ಅಜಯ್ ಸಿಂಗ್ ಅವರು ನಡೆಯುತ್ತಿದ್ದು, 1.60 ಲಕ್ಷ ಮತದಾರರ ಆರೋಗ್ಯ ತಪಾಸಣೆ ಜತೆಗೆ ಉಚಿತ ಅಂಬುಲೆನ್ಸ್ ಸೇವೆ ನೀಡಿದ್ದಾರೆ. ಕೆಕೆಆರ್‍ಡಿಬಿ ಅಧ್ಯಕ್ಷರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಮಾಜಿ ಮೇಯರ್ ಶರಣು ಮೋದಿ, ನೀಲಕಂಠರಾವ ಮೂಲಗೆ, ಶಿವಲಾಲಸಿಂಗ್, ರಾಜಶೇಖರ ಸೀರಿ, ಜೀವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಲಿಂಗ ರೆಡ್ಡಿ ಇಟಗಿ, ಯಡ್ರಾಮಿ ಅಧ್ಯಕ್ಷ ರುಕುಂ ಪಟೇಲ್ ಇಜೇರಿ, ಜಿಪಂ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಚಂದ್ರಶೇಖರ ಹರನಾಳ ಶಾಂತಪ್ಪ ಕೂಡಲಗಿ, ಉದ್ಯಮಿ ಶಿವಶರಣಪ್ಪ ಸಾಹು ಸೀರಿ, ಬಾಬಾ ಫರಿದ ಮಳ್ಳಿಕರ ಮಾಜೀದ್ ಸೇಠ ಗಿರಣಿ, ನೀಲಕಂಠ ಅವಂಟಿ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ಸಚಿಪ್ರಗೌಡ ಹರನೂರ, ಷಣ್ಮುಖಪ್ಪಗೌಡ ಹಿರೇಗೌಡ ಭಗವಂತರಾಯ ಬೆಂಣ್ಣೂರ್ , ಶಿವಕುಮಾರ ಕಲ್ಲಾ, ರವಿಚಂದ್ರ ಗುತ್ತೇದಾರ, ಶೌಕತ್ ಅಲಿಆಲೂರ , ಗೋಲಯ್ಯ ಹಿರೇಮಠ, ಶಾಂತಪ್ಪ ಯಲಗೋಡ ಸುಭಾಸ್ ಚನ್ನುರ ದಾವೂದ್ ಬಡಾಫರ್, ವಸಂತರಾವ ನರಿಬೋಳ, ಏಜಾಜ್ ನಮಾಜಿ,ವಿಶ್ವರಾಧ್ಯ ಮಾಯೇ ಗುರುಲಿಂಗಯ್ಯಸ್ವಾಮಿ ಯನಗುಂಟಿ . ನದಿಮ ಮಳ್ಳಿಕರ ಮಹಿಮೂದ್ ನೂರಿ, ಶರಣಗೌಡ ಸರಡಗಿ ಶಿವಶಂಕರ ಬಳಬಟ್ಟಿ ಗುರು ಜೈನಾಪುರ ಶರಬು ಕಲ್ಯಾಣಿ ನೆಲೋಗಿ ನಾಗರಾಜ್ ವಿಟಿ ರುಕ್ಕುತೋಲ ಸಂತೋಷ್ ಜೈನಾಪುರ್ ನಾಗರಾಜ್ ಆಲಗೂರು ಗೊಲ್ಲಾಳಪ್ಪ ಬೆಂಣ್ಣೂರ್ ಬಸಣ್ಣ ಸರ್ಕಾರ್ ಬಿಸಿಜಿ ಗದ್ದಿಗೆ ಮಠ ಭೀಮರಾಯ ಖಾಧ್ಯಪುರ್ ಪ್ರಕಾಶ್ ಕಾಂಬಳೆ ಶರಣಬಸವಪ್ಪ ರೇವನೂರ ಅಮರ ಬೊಮ್ಮನಹಳ್ಳಿ ಮೊಬಿನ್ ಗುತ್ತೇದಾರ, ಪುರಸಭೆ ಮಾಜಿ ಸದಸ್ಯ ಮರೆಪ್ಪ ಸರಡಗಿ ಸೇರಿದಂತೆ ಸಹಸ್ರಾರು ಜನ ಇದ್ದರು.






























