Home ಜಿಲ್ಲೆ ಬೆಂಗಳೂರು ಜನರಿಗೆ ಸೂಕ್ತ ರಕ್ಷಣೆ ಪೋಲಿಸರು ಜವಾಬ್ದಾರಿ

ಜನರಿಗೆ ಸೂಕ್ತ ರಕ್ಷಣೆ ಪೋಲಿಸರು ಜವಾಬ್ದಾರಿ

ಚಂದಾಪುರ /ಆನೇಕಲ್,ಆ೧೬: ವಾಸ ಮಾಡಲು ಉತ್ತಮವಾದ ಸ್ಥಳವೆಂದು ಅರಿತು ದೇಶದ ವಿವಿಧ ರಾಜ್ಯಗಳ ಜನರು ಈ ಬಾಗಕ್ಕೆ ಬಂದು ಬದುಕು ಕಟ್ಟಿಕೊಂಡಿದ್ದಾರೆ ಅವರಿಗೆ ವಾಸ ಮಾಡಲು ಸೂಕ್ತವಾದ ವ್ಯವಸ್ಥೆಯನ್ನು ಮಾಡಿ ಕೊಡ ಬೇಕಾದದ್ದು ಪೋಲಿಸ್ ಇಲಾಖೆ ಮತ್ತು ನಮ್ಮುಗಳ ಜವಬ್ದಾರಿಯಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ದಯಾನಂದರೆಡ್ಡಿ ರವರು ತಿಳಿಸಿದರು.


ಅವರು ಚಂದಾಪುರ ಪುರಸಭೆ ವ್ಯಾಪ್ತಿಯ ನೀಲ ಇಟನಿ ಬಡಾವಣೆಯಲ್ಲಿ ಆನೇಕಲ್ ತಾಲ್ಲೂಕು ರೆಸ್ ಪಾನ್ಸಿಬಲ್ ಸಿಟಿಜನ್ಸ್ ಸೋಸೈಟಿ ವತಿಯಿಂದ ಹಮ್ಮಿಕೊಂಡಿದ್ದ ೮೦ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬಾಗವಹಿಸಿ ಮಾತನಾಡಿದರು. ಇತ್ತೀಚೆಗೆ ಅನಂತನಗರದಲ್ಲಿ ರಸ್ತೆ ಅಪಘಾತದಲ್ಲಿ ಮೇಧಾ ಎಂಬ ಯುವತಿ ಮೃತಪಟ್ಟಿದ್ದು. ಇನ್ನು ಗುಣಮಟ್ಟದ ರಸ್ತೆಗಳಿಲ್ಲದೆ ಅಪಘಾತಗಳು ನಡೆಯುತ್ತಿವೆ ಎಂದು ಆರೋಪಿಸಿ ಬಡಾವಣೆಗಳ ನಿವಾಸಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರು ಆದರೆ ಹೆಬ್ಬಗೋಡಿ ಪೊಲೀಸಲು ನಿವಾಸಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಅದು ಒಳ್ಳೆಯ ಬೆಳವಣಿಗೆಯಲ್ಲ. ಜನರು ತಮ್ಮ ಹಕ್ಕುಗಳನ್ನು ಕೇಳುವುದರಲ್ಲಿ ತಪ್ಪೇನಿದೆ ಎಂದು ಹೇಳಿದರು.


ಕಳೆದ ೪ ವರ್ಷಗಳಿಂದ ಹುಸ್ಕೂರು ಹಣ್ಣು ಮಾರುಕಟ್ಟೆ- ಹೀಲಲಿಗೆ-ಸಿಂಗೇನ ಅಗ್ರಹಾರ-ಅನಂತನಗರ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದು ಸಾರ್ವಜನಿಕರು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದು ರಸ್ತೆಯನ್ನು ಸರಿಪಡಿಸಿಕೊಡುವಂತೆ ಇಲಾಖೆ ಅದಿಕಾರಿಗಳಿಗೆ ಹಲವಾರು ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಈ ನಿಟ್ಟಿನಲ್ಲಿ ಇಂದು ಎಲ್ಲರ ಸಹಕಾರದಲ್ಲಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ತಾತ್ಕಾಲಿಕವಾಗಿ ವೆಟ್ ಮಿಕ್ಸ್ ಹಾಕಿ ಮುಚ್ಚಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು ಎಂದು ಹೇಳಿದರು.


ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದು ಆಲಿಸಲು ಸಿಎಂ ಡಿ.ಕೆ. ಶಿವಕುಮಾರ್ ರವರು ಪ್ರಜಾ ಸೇವೆ ಎಂಬ ಇಲಾಖೆಯನ್ನು ನೂತನವಾಗಿ ಪ್ರಾರಂಭ ಮಾಡಿರುವುದು ನಿಜಕ್ಕೂ ಉತ್ತಮವಾದ ಕಾರ್ಯವಾಗಿದೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.


ಇದೇ ಸಂಧರ್ಭದಲ್ಲಿ ಅನಂತನಗರದಲ್ಲಿ ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮೇದ ಎಂಬ ಯುವತಿಯ ಹೆಸರಿನಲ್ಲಿ ಸುಮಾರು ೧೦ ಗಿಡಗಳನ್ನು ನೆಟ್ಟು ನಂತರ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಚಂದಾಪುರ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಜಗದೀಶಾಚಾರಿ. ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಹೀಲಲಿಗೆ ಕೃಷ್ಣಾರೆಡ್ಡಿ. ವೇಣುಗೋಪಾಲ್. ಪುರಸಭೆ ಸದಸ್ಯರಾದ ವೈ. ರಮೇಶ್. ಆನೇಕಲ್ ತಾಲ್ಲೂಕು ರೆಸ್ ಪಾನ್ಸಿಬಲ್ ಸಿಟಿಜನ್ಸ್ ಸೋಸೈಟಿಯ ಅಧ್ಯಕ್ಷೆ ಅನಿತಾರೆಡ್ಡಿ. ಸಮಾಜ ಸೇವಕರಾದ ಶಂಕರ್. ನವೀನ್ ರೆಡ್ಡಿ. ಚೇತನ್. ಸಂದೀಪ್. ಸಚಿನ್. ಮಾಜಿ ಸೈನಿಕ ಶರ್ಮ. ಬಡಾವಣೆಯ ನಿವಾಸಿಗಳು ಬಾಗವಹಿಸಿದ್ದರು.