
ಜೇವರ್ಗಿ,ಮೇ.18-ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರ ಕಾರ್ಮಿಕರು ತಹಶೀಲ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಭಾನುವಾರ ಮಳೆಗಾಳಿಗೆ ವಿದ್ಯುತ್ ಕಂಬ ಟೆಂಟ್ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಧರಣಿ ನಿರತ ಪೌರ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಹಸೀಲ ಕಛೇರಿ ಎದುರುಗಡೆ ಕಳೆದ ತಿಂಗಳು ಏಪ್ರಿಲ್ 13 ರಿಂದ ಪೌರ ಕಾರ್ಮಿಕರು ತಮ್ಮ ಬಹು ದಿನದ ಬೇಡಿಕೆಗಳಾದ ಸುಮಾರು ವರ್ಷ ಕೆಲಸ ಮಾಡಿದ ಪೌರಕಾರ್ಮಿಕರಿಗೆ ನೇಮಕಾತಿ ಮಾಡಿಕೊಳ್ಳಬೇಕು, ನಾಲ್ಕು ವರ್ಷ ದಿಂದ ನಿಂತ ಬಾಕಿ ವೇತನ ಕೊಡುವಂತೆ ಒತ್ತಾಯಿಸಿ ಟೆಂಟ್ ಹಾಕಿಕೊಂಡು ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಭಾನುವಾರ ಗಾಳಿ, ಮಳೆಗೆ ಧರಣಿ ನಿರತ ಕಾರ್ಮಿಕರ ಟೆಂಟ್ ಮೇಲೆ ವಿದ್ಯುತ್ ಕಂಬ ಹಾಗೂ ವೈರು ಬಿದ್ದು ಭಾರಿ ಅನಾಹುತದಿಂದ ಕಾರ್ಮಿಕರು ಬಚವಾಗಿದ್ದಾರೆ, ಇಂತಹ ಘಟನೆ ನಡೆದರೂ ತಾಲೂಕು ಆಡಳಿತ ತನಗೆ ಸಂಬಂದ ಇಲ್ಲದ ಹಾಗೆ ನಡೆದುಕೊಳ್ಳುತ್ತಿರುವುದು ಖಂಡನೀಯವಾಗಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




















