Home ಜಿಲ್ಲೆ ಬರ ಅಧ್ಯಯನ

ಬರ ಅಧ್ಯಯನ


ಬಾದಾಮಿ,ಆ.೭: ಜಿಲ್ಲೆಯಲ್ಲಿಯೆ ಬೃಹತ್ ಕೆರೆಯಾದ ತಾಲೂಕಿನ ಕೆಂದೂರು ಕೆರೆಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ ಹಾಗೂ ಶಾಸಕರಾದ ಹನಮಂತ ನಿರಾಣಿ, ಪಿ.ಎಚ್.ಪೂಜಾರ, ರಾಯಭಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ತಂಡ ಭೇಟಿ ನೀಡಿ ಬರ ಅಧ್ಯಯನ ನಡೆಸಿದರು.


ಗುರುವಾರ ತಾಲೂಕಿನ ಕೆಂದೂರು ಕೆರೆಯನ್ನು ವೀಕ್ಷಣೆ ಮಾಡಿ ರೈತರ ಸಮಸ್ಯೆಯನ್ನು ಆಲಿಸಿದರು. ಕೆರೆಯ ಪ್ರದೇಶ ಮತ್ತು ನೀರಿನ ಮಟ್ಟ ಸೇರಿದಂತೆ ಮಾಹಿತಿಯನ್ನು ಪಡೆದ ಅವರು ನದಿಯಿಂದ ೫ಕೋಟಿ ಯೋಜನೆ ಚಿಕ್ಕ ಪೈಪ್ ಲೈನ್ ಮಾಡಿಸಿ ಕೈತೊಳೆದು ಬಿಟ್ಟಿದ್ದಾರೆ ಎಂದರು.


ರೈತರು ಒಗ್ಗಟ್ಟಾಗಿ ನಿಮ್ಮ ಧ್ವನಿ ಹೊರಹೊಮ್ಮಬೇಕು. ಕೆಂದೂರ ಕೆರೆಯ ಅಭಿವೃದ್ಧಿಯಾದಲ್ಲಿ ಸುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿನ ರೈತರ ಜಮೀನುಗಳಿಗೆ ನೀರಾವರಿ ಹೆಚ್ಚಾಗುವ ಜತೆಗೆ ರೈತರ ಬಾಳು ಹಸನಾಗುವುದು. ಇದಕ್ಕೆ ನಿಮ್ಮೆಲ್ಲರ ಒಗ್ಗಟ್ಟಿಗೆ ನಾವು ಬದ್ಧರಾಗಿ ಬೆಂಬಲ ನೀಡುತ್ತೇವೆ ಎಂದರು.

ತಾಲೂಕಿನ ವಿವಿಧ ಗ್ರಾಪಂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ೨೦ ಕೋಟಿಗೂ ಅಧಿಕ ಹಣ ಹೂಳು ಎತ್ತುವಕ್ಕೆ ವೆಚ್ಚ ಮಾಡಲಾಗಿದೆ. ಆದರೆ ಯಾವದೊಂದು ಮುಳ್ಳುಕಂಟಿಯೂ ತಗೆದಿಲ್ಲ. ಇಲ್ಲಿಯ ಕಪ್ಪು ಮಣ್ಣು ಹೊಲಗಳಿಗೆ ಅಕ್ರಮವಾಗಿ ದಂಧೆಕೋರರು ಲೂಟಿ ಮಾಡುತ್ತಿದ್ದಾರೆ. ಯಾವದಕ್ಕೂ ತಡೆ ಇಲ್ಲದೆ ಅಭಿವೃದ್ದಿಯಾಗದೆ ಕೆರೆಯ ಹೆಸರಿನಲ್ಲಿ ಹೂಳೆತ್ತುವ ಬದಲು ಹಣ ಎತ್ತುವ ಕೆಲಸ ನಡೆಯುತ್ತಿದೆ ಎಂದು ರೈತರು ಆರೋಪಿಸಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ತಾಲೂಕ ಮಂಡಲ ಅಧ್ಯಕ್ಷ ನಾಗರಾಜ ಕಾಚೆಟ್ಟಿ, ಬಸವರಾಜ ಯಂಕAಚಿ, ಮುತ್ತು ಉಳ್ಳಾಗಡ್ಡಿ, ಬೇಲೂರಪ್ಪ ವಡ್ಡರ, ಮಲ್ಲಯ್ಯ ಮೂಗನೂರಮಠ, ಹಾದಿಮನಿ, ಅಂಗಡಿ ಸೇರಿದಂತೆ ಗ್ರಾಮಸ್ಥರು ಇದ್ದರು.