
ಔರಾದ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಮಾರು ೪ ವರ್ಷಗಳ ಕಾಲ ದೈಹಿಕ ನಿರ್ದೇಶಕರಾಗಿ ರಾಷ್ಟಮಟ್ಟದಲ್ಲಿ ಹಾಗೂ ರಾಜ್ಯ ಅಂತರರಾಜ್ಯ ಮತ್ತು ವಿಶ್ವವಿದ್ಯಾಲಯ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುವಂತೆ ಪ್ರೇರೇಪಿಸಿದ ದೈಹಿಕ ನಿರ್ದೇಶಕರಾದ ಪ್ರೊ. ಊರ್ವಶಿ ಕೊಡ್ಲಿ ಅವರಿಗೆ ಗೌರವಿಸಲಾಯಿತು.
ಔರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಭಾಲ್ಕಿ ಕಾಲೇಜಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಾಲ್ಕು ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿ ಮಕ್ಕಳಿಗೆ ಪ್ರೇರಣಾ ಶಕ್ತಿಯಾಗಿ ನಿಂತು ಶಾಸಕರು ಹಮ್ಮಿಕೊಂಡಿದ್ದ ದಹಿ ಹಂಡಿ ಕ್ರೀಡೆಯಲ್ಲಿ ಎರಡು ಬಾರಿ ಪ್ರಥಮ ಬಹುಮಾನ ಪಡೆದು ವಿದ್ಯಾರ್ಥಿಗಳಿಗೆ ಪ್ರೆರಣೆಯಾಗಿ ದೈಹಿಕ ನಿರ್ದೇಶನ ನೀಡಿದ್ದು ಶ್ಲಾಘನೀಯ ಎಂದರು.
ಈ ವೇಳೆ ಪ್ರಾಂಶುಪಾಲರಾದ ಅಂಬಿಕಾದೇವಿ ಕೊತಮಿರಿ ಅವರು ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ವಿದ್ಯಾರ್ಥಿ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು .
ಈ ಸಂದರ್ಭದಲ್ಲಿ ವಿನಾಯಕ ಕೊತಮಿರಿ, ಡಾ.ಸಂಜಿವಕುಮಾರ ತಾಂದಳೆ, ಮಹೇಶ ಕುಮಾರ ರಾಮಚಂದ್ರ, ಪ್ರೋ ಶಿವಕುಮಾರ ಅಣದೂರ, ಕೆ ಅಂಬಿಕಾ, ಗುಡ್ಡದಮ್ಮಾ ಹಾಗೂ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಬಾದಾಸ ನಳಗೆ, ವಿದ್ಯಾರ್ಥಿ ನಾಯಕ ಅಶೋಕ ಶೆಂಬೆಳ್ಳಿ, ಅನೀಲ ಪಾಟೀಲ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.






























