Home ಜಿಲ್ಲೆ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಡಾ. ಭೀಮಸೇನರಾವ ಶಿಂಧೆ ಸಾಂತ್ವನ

ಸಂಕಷ್ಟದಲ್ಲಿರುವ ಕುಟುಂಬಕ್ಕೆ ಡಾ. ಭೀಮಸೇನರಾವ ಶಿಂಧೆ ಸಾಂತ್ವನ

ಔರಾದ್ : ಜೂ.17: ತಾಲೂಕಿನ ಶೆಂಬೆಳ್ಳಿ ಗ್ರಾಮದ ವೈಜಿನಾಥ ಮೇತ್ರೆ ಅವರ ಕುಟುಂಬದಲ್ಲಿ ಸಂಭವಿಸಿದ ದುರ್ಘಟನೆಯ ಹಿನ್ನೆಲೆಯಲ್ಲಿ ಮಂಗಳವಾರ ನಿವೃತ್ತ ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ ಶಿಂಧೆ ಅವರು ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಜೀವನೋಪಾಯಕ್ಕಾಗಿ ಹೈದರಾಬಾದ್‍ನಲ್ಲಿ ನೆಲೆಸಿದ್ದ ವೈಜಿನಾಥ ಮೇತ್ರೆ ಅವರ ಪತ್ನಿ ಇಂದುಮತಿ ಹಾಗೂ ಐವರು ಮಕ್ಕಳು ಮಾವಿನ ಹಣ್ಣು ಸೇವಿಸಿದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಪುತ್ರಿಯರಾದ ಭವನೇಶ್ವರಿ ಮತ್ತು ಸುಧಾರಾಣಿ ಮೃತಪಟ್ಟಿದ್ದು, ಉಳಿದ ಮೂವರು ಬಾಲಕಿಯರು ಚೇತರಿಸಿಕೊಂಡಿದ್ದಾರೆ.
ಕುಟುಂಬದ ನಿವಾಸಕ್ಕೆ ಭೇಟಿ ನೀಡಿದ ಡಾ. ಶಿಂಧೆ ಅವರು ವೈಯಕ್ತಿಕವಾಗಿ 50 ಸಾವಿರ ಆರ್ಥಿಕ ನೆರವು ನೀಡಿದರು. ಜೊತೆಗೆ ಕುಟುಂಬದ ಯುವತಿಯೊಬ್ಬರಿಗೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಉದ್ಯೋಗ ಕಲ್ಪಿಸುವುದಾಗಿ ಹಾಗೂ ಸರ್ಕಾರದ ವತಿಯಿಂದ ಮನೆ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
“ಈ ಘಟನೆ ನನಗೆ ತುಂಬಾ ನೋವುಂಟು ಮಾಡಿದೆ. ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬ ತೀವ್ರ ದುಃಖದಲ್ಲಿದೆ. ಭಗವಂತನು ಕುಟುಂಬದವರಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿ. ಯಾವುದೇ ಸಮಸ್ಯೆ ಎದುರಾದರೂ ನನ್ನನ್ನು ಸಂಪರ್ಕಿಸಿ. ನಾನು ಸದಾ ನಿಮ್ಮ ಕುಟುಂಬದೊಂದಿಗೆ ಇರುತ್ತೇನೆ,” ಎಂದು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಸುಭಾಷ್ ನಾಗೂರ, ಚುನ್ನುಮೀಯ್ಯ ಶೆಂಬೆಳ್ಳಿ, ಸೂರ್ಯಕಾಂತ ಮಾಲೆ, ಬಂಡೆಪ್ಪ ಎಂಕೆಮೂರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.