
ಕಲಬುರಗಿ: ಸಮಾಜಸೇವೆಯ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಸ್ಪಂದನಾ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ನಗರದ ಸೆಂಟ್ ಮೇರಿ ಚರ್ಚ್ನಲ್ಲಿ ಬಡವರು ಹಾಗೂ ವಿದ್ಯಾರ್ಥಿಗಳಿಗೆ ಬೆಡ್ಶೀಟ್, ಚಾದರ್, ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸ್ಪಂದನಾ ಗ್ರೂಪ್ ಅಧ್ಯಕ್ಷೆ ಲತಾ ಎಸ್. ಬಿಲಗುಂದಿ, ಉಪಾಧ್ಯಕ್ಷೆ ಸುಮಾ ಎಸ್. ಪಪ್ಪಾ, ಕಾರ್ಯದರ್ಶಿ ಜ್ಯೋತಿ ಬಿ. ನಿಪ್ಪಾಣಿ, ಖಜಾಂಚಿ ರೂಪಾ ಬಿ. ಪವಾರ್ ಹಾಗೂ ಗ್ರೂಪ್ನ ಸದಸ್ಯೆಯರಾದ ರೇಣುಕಾ ಸ್ವಂತ, ಬನ್ನುಸ್ವಾಮಿ, ಈರಮ್ಮ ಭೀಮಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.




















