
ಕಲಬುರಗಿ,ಜೂ.೧- ಹಿಂದುಳಿದ ಕೋಲಿ ಸಮಾಜದ ಪ್ರಭಾವಿ ನಾಯಕರಾಗಿರುವ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಪೂರ್ಣಾವಧಿಗಾಗಿ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವಂತೆ ಕಲ್ಯಾಣ ಕರ್ನಾಟಕ ಕೋಲಿ (ಗಂಗಾಮತ) ಸಮಾಜದ ಅಧ್ಯಕ್ಷ ಅಮೃತ ಎಚ್.ಡಿಗ್ಗಿ ಅವರು ಮನವಿ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಿನ್ನೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಿಷ್ಟವಂತ ಕಾರ್ಯಕರ್ತ ಮತ್ತು ಮುಖಂಡರಾಗಿ ಹಲವು ದಶಕಗಳ ಕಾಲ ಕೆಲಸ ಮಾಡಿರುವ ಅವರು, ಹಿಂದುಳಿದ ಕೋಲಿ ಸಮಾಜದ ಧ್ವನಿಯಾಗಿ ಕಮಾಜದ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರನ್ನು ಪೂರ್ಣಾವಧಿಯ ಆರು ವರ್ಷದ ಎಂ.ಎಲ್.ಸಿ ಸ್ಥಾನಕ್ಕೆ ನೇಮಕ ಮಾಡುವ ಮೂಲಕ ಕೋಲಿ ಸಮಾಜಕ್ಕೆ ಸಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಿಪ್ಪಣ್ಣಪ್ಪ ಕಮಕನೂರ ಅವರು, ತಮ್ಮ ಅಲ್ಪವಧಿಯ ಎಂ.ಎಲ್.ಸಿ ಅಧಿಕಾರವಧಿಯಲ್ಲಿ ಜನಪರ ಸೇವೆ ಸಲ್ಲಿಸಿದ್ದಾರೆ. ವಿಷೇಶವಾಗಿ ಕೋಲಿ ಸಮಾಜದ ಸಂಘಟನೆ ಮತ್ತು ಐಕ್ಯಾತೆಗಾಗಿ ದುಡಿಯುತ್ತಿದ್ದಾರೆ. ರಾಜಧಾನಿ ಬೆಂಗಳೂರು ಮತ್ತು ಕಲಬುರಗಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆ ಪ್ರತಿಷ್ಠಾಪನೆಗಾಗಿ, ಸಮಾಜಕ್ಕೆ ಎಸ್ಟಿ ಸ್ಥಾನಮಾನ, ಪ್ರಾಧಿಕಾರ ರಚನೆ ಹೀಗೆ ಹತ್ತು ಹಲವು ಪ್ರಮುಖ ಬೇಡಿಕೆಗಳಿಗೆ ಸ್ಪಂಧಿಸುವ ಮೂಲಕ ಸಮಾಜದ ಮೆಚ್ಚುಗೆಯ ನಾಯಕರಾಗಿದ್ದಾರೆ. ಅವರನ್ನು ಎಂಎಲ್.ಸಿ ಮಾಡುವಂತೆ ಕಾಂಗ್ರೆಸ್ ಪಕ್ಷದ ವರಿಷ್ಟರಿಗೆ ಡಿಗ್ಗಿ ಅವರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅರ್ಜುನ ಜಮಾದಾರ, ಸಂಗಮನಾಥ ಕಣ್ಣಿ, ಸುಖದೇವ ಕೋಗನೂರ, ರಮೇಶ ಎಸ್.ಬಿದನೂರ, ರಾಯಪ್ಪ ಹೊನಗುಂಟಿ, ದತ್ತು ಹೊನ್ನಳ್ಳಿ, ಬಸವರಾಜ ಬಳೂರ್ಗಿ ಸೇರಿದಂತೆ ಹಲವರಿದ್ದರು.






























