Home ಜಿಲ್ಲೆ ನೀರಿಗಾಗಿ ಹಾಹಾಕಾರ

ನೀರಿಗಾಗಿ ಹಾಹಾಕಾರ

ಚನ್ನಮ್ಮನ ಕಿತ್ತೂರು,ಜೂ ೨೮: ತಾಲೂಕಿನ ಬೈಲೂರ ಗ್ರಾಪಂ ವ್ಯಾಪ್ತಿಯ ದೇಗುಲಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು ಹಲವು ದಿನಗಳಿಂದ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.


ಕಳೆದ ೨-೩ ತಿಂಗಳಿAದ ನೀರು ಬರದ ಕಾರಣ ಕುಡಿಯುವ ನೀರಿಗಾಗಿ ಗ್ರಾಮದ ಮಹಿಳೆಯರು ಹೊಲಗಳಲ್ಲಿನ ಕೊಳವೆ ಬಾವಿಗಳಲ್ಲಿ ನೀರು ತರಲು ಹೋಗುತ್ತಿರುವ ದೃಶ್ಯಗಳು ಕಂಡು ಬಂದಿವೆ.


ಗ್ರಾಪಂ ಅಧಿಕಾರಿಗಳ ನಿರ್ಲಕ್ಷದಿಂದ ಗ್ರಾಮದ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಗ್ರಾಮದಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಗ್ರಾಪಂಗೆ ಹಲವು ಬಾರಿ ಮನವಿ ಸಲ್ಲಿಸಿದರು. ಪ್ರಯೋಜನವಾಗಿಲ್ಲ. ಇದುವರೆಗೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದರಿಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.


ಇದಲ್ಲದೇ ಗ್ರಾಮದಲ್ಲಿರುವ ಬಹುತೇಕ ಚರಂಡಿಗಳು ಸ್ವಚ್ಚಗೊಳಸದ ಕಾರಣ ಕೊಳಚೆ ಗಬ್ಬು ನಾರುತ್ತಿದೆ. ಅನೈರ್ಮಲ್ಯದಿಂದ ಕೂಡಿದ ಚರಂಡಿಗಳು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟು ಮಾಡುತ್ತಿದೆ. ತ್ಯಾಜ್ಯ ಮತ್ತು ಕಸಕಡ್ಡಿಗಳಿಂದ ತುಂಬಿದ ಚರಂಡಿಗಳು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ.


ನಿಂತ ಕೊಳಚೆ ನೀರು ಡೆಂಗ್ಯೂ, ಮಲೇರಿಯಾ ಹರಡುವ ಕೇಂದ್ರವಾಗಿದೆ. ಅದು ಎಸ್ಸಿ,ಎಸ್ಟಿ ಕಾಲೋನಿಯಲ್ಲಿಯಂತು ಕೊಳೆತ ತ್ಯಾಜ್ಯದಿಂದ ಹೊರ ಸುಸೂವ ಕೆಟ್ಟ ಗಾಳಿ ಪರಿಸರ ಮಲೀನಗೊಳಿಸಿ ಉಸಿರಾಟದ ತೊಂದರೆ ಮತ್ತು ವಾಂತಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.


ಗ್ರಾಪಂದವರು ಚರಂಡಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಚರಂಡಿಗೆ ಹಾಕದೇ ಕಸದ ಬುಟ್ಟಿಗಳಲ್ಲಿ ಮಾತ್ರ ವಿಲೇವಾರಿ ಮಾಡುಲು ಮಾತ್ರ ಕ್ರಮ ಕೈಗೊಳ್ಳಬೇಕು. ಹಳ್ಳಿಗಳ ಸುಧಾರಣೆಗೆ ಕೇಂದ್ರ-ರಾಜ್ಯ ಸರ್ಕಾರಗಳು ನೂರಾರು ಕೋಟಿ ಅನುದಾನ ವ್ಯಯಿಸುತ್ತಿವೆ. ಸ್ಥಳೀಯ ಶಾಸಕರ ಅನುದಾನಡಿಯಲ್ಲಿ ಗ್ರಾಮ ಅಭಿವೃಧ್ದಿಗೊಂಡಿದೆ ಆದರೆ ಅಧಿಕಾರಿಗಳ ಇಚ್ಚಾ ಶಕ್ತಿ ಕೊರತೆಯಿಂದ ಮತ್ತು ಆಡಳಿತ ವ್ಯವಸ್ಥೆ ವೈಫಲ್ಯದಿಂದ ಗ್ರಾಮಗಳಲ್ಲಿ ನೀರಿನ ವ್ಯವಸ್ಥೆ ಮತ್ತು ಗ್ರಾಮ ಸ್ವಚ್ಛೆತೆ, ಬೀದಿ ದೀಪ ಮರಿಚೀಕೆಯಾಗಿದೆ. ಇಷ್ಟೆಲ್ಲಾ ಆದರೂ ಗ್ರಾಪಂ ಮತ್ತು ತಾಪಂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.