
ಕಲಬುರಗಿ,ಆ.24-ಜಿಲ್ಲೆಯಲ್ಲಿ ದಿನೇ ದಿನೇ ಜನಸಾಂದ್ರತೆ ಹೆಚ್ಚಾಗುತ್ತಿದ್ದು, 2011 ರಲ್ಲಿ 3 ರಿಂದ 4 ಲಕ್ಷ ಇದ್ದ ಜನಸಂಖ್ಯೆ ಈಗ ಸುಮಾರು 10 ಲಕ್ಷಕ್ಕೂ ಹೆಚ್ಚಾಗಿದೆ. ಜನಸಂಖ್ಯೆ ಆಧಾರಿತ ಜಿಲ್ಲೆಗೆ ಮೂಲ ಸೌಕರ್ಯಗಳು ಒದಗಿಸಬೇಕು ಹಾಗೂ ಯೋಜನೆಗಳು ಜಾರಿಯಾಗಬೇಕು. ಆದರೆ, ಜನಸಂಖ್ಯೆ ಆಧಾರಿತ ಮೂಲ ಸೌಕರ್ಯಗಳು ಸರಿಯಾದ ಸಮಯಕ್ಕೆ ಸಿಗದ ಕಾರಣ ಅಸ್ತವ್ಯಸ್ತ ಆಗುತಿದ್ದು ಜಿಲ್ಲೆಯ ಶೋಭೆ ಕಳೆದುಕೊಳ್ಳುತ್ತಿದೆ. ಅದೇ ರೀತಿಯಾಗಿ ಬಿಪಿಎಲ್ ಕಾರ್ಡ್‍ದಾರರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ 50 ವರ್ಷದಿಂದ ವಾಸಿಸುತ್ತಿರುವ ಜನರಿಗೆ ಉಚಿತವಾಗಿ 1ಬಿಹೆಚ್‍ಕೆ ಅಥವಾ 2ಬಿಹೆಚ್‍ಕೆ ಪ್ಲಾಟ್ ಅಥವಾ ಖುಲ್ಲಾ ಜಾಗ ನೀಡಬೇಕು ಹಾಗೂ ಉತ್ತಮ ಚರಂಡಿ ರಸ್ತೆ ವ್ಯವಸ್ಥೆ ಮಾಡುವುದರ ಮೂಲಕ ಕಲ್ಯಾಣ್ ಕರ್ನಾಟಕದ ಭಾಗಕ್ಕೆ ಹಾಗೂ ವಿಶೇಷವಾಗಿ ಕಲಬುರಗಿ ಜಿಲ್ಲೆಗೆ ಅನುದಾನ ನೀಡಬೇಕು ಬಡವರಿಗೆ ನಿವೇಶನ ನೀಡಬೇಕು ಎಂದು ಕೆ. ಕೆ. ಟೈಗರ್ಸ್ ಬ್ರಿಗೇಡ್ ವತಿಯಿಂದ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೆ.ಕೆ.ಟೈಗರ್ಸ್ ಬ್ರಿಗೇಡ್ ರಾಜ್ಯ ಅಧ್ಯಕ್ಷ ಸತೀಶಕುಮಾರ್ ಸೂಗೂರು, ಜಿಲ್ಲಾ ಅಧ್ಯಕ್ಷ ಸಿದ್ದಣ್ಣ ವಚ್ಚಾ, ಗೌರವಾಧ್ಯಕ್ಷ ಹಣಮಂತ ಬೆಂಕಿ, ಕಲಬುರಗಿ ಗ್ರಾಮೀಣ ತಾಲ್ಲೂಕ ಅಧ್ಯಕ್ಷ ಉಮೇಶ ನಾಟಿಕಾರ ಹಾಗೂ ಬ್ರಿಗೇಡ್ ಸದ್ಯಸರು ಉಪಸ್ಥಿತರಿದ್ದರು.






























