Home ಜಿಲ್ಲೆ ಗ್ರಾಮೀಣ ಭಾಗದಲ್ಲಿ ಇಂದನ ಅಭಾವ ನೀಗಿಸಲು ಒತ್ತಾಯ

ಗ್ರಾಮೀಣ ಭಾಗದಲ್ಲಿ ಇಂದನ ಅಭಾವ ನೀಗಿಸಲು ಒತ್ತಾಯ

ತಾಳಿಕೋಟೆ:ಜೂ.೧: ಗ್ರಾಮೀಣ ಭಾಗದ ಪೇಟ್ರೋಲ್ ಪಂಪಗಳಲ್ಲಿ ಇಂದನ ಅಭಾವದಿಂದ ರೈತರಿಗೆ ಅತೀವ ತೊಂದರೆಯುAಟಾಗುತ್ತಾ ಸಾಗಿದ್ದು ರೈತರು ಜಮೀನು ಉಳುಮೆಯ ಸಮಯದಲ್ಲಿ ಟ್ಯಾçಕ್ಟರ್‌ಗಳಿಗೆ ಡಿಸೇಲ್ ಸಿಗದೇ ಪರದಾಡುವಂತಾಗಿದ್ದು ಕೂಡಲೇ ಈ ಇಂದನ ಅಭಾವನ್ನು ಜಿಲ್ಲಾಧಿಕಾರಿಗಳು ಸರಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಕೆಪಿಸಿಸಿ ಮಾಜಿ ಸದಸ್ಯ ಸುರೇಶಬಾಬುಗೌಡ ಬಿರಾದಾರ(ಫೀರಾಪೂರ) ಅವರು ಒತ್ತಾಯಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ರೈತರು ಅತೀ ಹೆಚ್ಚು ಟ್ರಾö್ಯಕ್ಟರ್‌ಗಳ ಮೂಲಕವೇ ಜಮೀನು ಸ್ವಚ್ಚತೆಯಿಂದ ಹಿಡಿದು ಉಳಿಮೆಯನ್ನು ಹಾಗೂ ಗೊಬ್ಬರ, ಎಣ್ಣೆ ಹೊಡೆಯುವ ಕಾರ್ಯ ಮಾಡುತ್ತಾರೆ ಸದ್ಯ ಉಳಿಮೆಯ ಸಮಯ ಹತ್ತಿರವಿರುವದರಿಂದ ರೈತಾಪಿ ಜನರು ಕ್ಯಾನ್‌ಗಳ ಮೂಲಕವೇ ಡಿಸೇಲ್ ಪಡೆದುಕೊಳ್ಳಲು ಆಗಮಿಸುವದು ಸಾಮಾನ್ಯ ಆದರೆ ಫೀರಾಪೂರ ಗ್ರಾಮದಲ್ಲಿರುವ ಗ್ರಾಮೀಣ ಭಾಗದ ಪೇಟ್ರೋಲ್ ಪಂಪ ಮಾಲಿಕರು ಕ್ಯಾನ್‌ಗಳಿಗೆ ಡಿಸೇಲ್ ನೀಡುತ್ತಿಲ್ಲಾ ಇದರಿಂದ ರೈತಾಪಿ ಜನರಿಗೆ ತುಂಬಾ ತೊಂದರೆಯುAಟಾಗುತ್ತಾ ಸಾಗಿದೆ ಟ್ರಾö್ಯಕ್ಟರ್‌ಗಳನ್ನೇ ಪಂಪಿಗೆ ತೆಗೆದುಕೊಂಡು ಹೋಗಿ ಹಾಕಿಕೊಳ್ಳಬೇಕೆಂದರೆ ಸುಮಾರು ೨೦ ರಿಂದ ೩೦ ಕೀಲೋ ಮೀಟರ್‌ನಷ್ಟು ದೂರಾಗಲಿದೆ ಇಂದನ ಉಳಿಸುವದರ ಜೊತೆಗೆ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕೆಂದರೆ ಪಂಪಿನ ಮಾಲಿಕರೇ ಸಹಕರಿಸದಿರುವದು ರೈತರ ಕಷ್ಟದಾಯಕವಾಗಿದೆ ಈ ಪಂಪಿಗೆ ಸುತ್ತಲಿನ ಹತ್ತಾರು ಗ್ರಾಮಗಳ ರೈತರು ಇಂದನ ತೆಗೆದುಕೊಂಡು ಹೋಗಲು ಬಂದರೆ ಡಿಸೇಲ್ ನೀಡುವದಿಲ್ಲಾವೆಂದು ಉಡಾಫೆ ಉತ್ತರದಿಂದ ಮಾತನಾಡುತ್ತಾರೆ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ತಾಲೂಕಾ ತಹಶಿಲ್ದಾರರು ಗ್ರಾಮೀಣ ಭಾಗದ ಫೀರಾಪೂರ ಗ್ರಾಮದಲ್ಲಿರುವ ಪೇಟ್ರೋಲ್ ಪಂಪಿನ ಮಾಲಿಕರಿಗೆ ರೈತರ ಕ್ಯಾನ್‌ಗಳಿಗೂ ಡಿಸೇಲ್ ಒದಗಿಸಲು ನಿರ್ದೇಶನ ನೀಡಬೇಕೆಂದು ಕೆಪಿಸಿಸಿ ಮಾಜಿ ಸದಸ್ಯ ಸುರೇಶಬಾಬುಗೌಡ ಬಿರಾದಾರ(ಫೀರಾಪೂರ) ಅವರು ಒತ್ತಾಯಿಸಿದ್ದಾರೆ.