
ಚಿಕ್ಕಬಳ್ಳಾಪುರ,ಜೂ.೩೦:ಕೆಂಪೇಗೌಡ ಜಯಂತಿಯ ಸಂದರ್ಭದಲ್ಲಿ ನಡೆದ ಘಟನೆಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ಪ್ರಚೋದನೆಯೇ ಮುಖ್ಯ ಕಾರಣವಾಗಿದೆ. ಹೀಗಾಗಿ ಶಾಸಕರ ವಿರುದ್ಧ ಪೋಲಿಸ್ ಕೇಸ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಶ್ರೀ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ.ರೆಡ್ಡಿ ಒತ್ತಾಯಿಸಿದ್ದಾರೆ.
ಅಂದು ಕಾರ್ಯಕ್ರಮದ ವೇಳೆ ಶಾಸಕರ ವರ್ತನೆಯಿಂದಾಗಿ ಅಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿತ್ತು.ಯಾವುದೇ ವಿಷಯ ತಿಳಿಯದಿದ್ದರೂ,ಶಾಸಕರು ಪ್ರಚೋದನೆ ನೀಡಿದ್ದರಿಂದ ಜನ ಸಮೂಹದ ಮೇಲೆ ತೊಂದರೆ ಉಂಟಾಯಿತು ಎಂದು ಆರೋಪಿಸಿದರು,ಅಲ್ಲದೆ,ಮುಗ್ಧ ಯುವಕರ ಮೇಲೆ ಸುಳ್ಳು ಎಫ್‌ಐಆರ್ ದಾಖಲಿಸಲಾಗಿದ್ದು,ಅವರಿಗೆ ಅನ್ಯಾಯವಾಗಿದೆ ಎಂದು ಸಂದೀಪ್ ರೆಡ್ಡಿ ದೂರಿದರು.
ಇನ್ನು ಯುವಕರ ಮೇಲೆ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕು.ಜೊತೆಗೆ ಶಾಸಕ ಪ್ರದೀಪ್ ಈಶ್ವರ್‌ರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಪೊಲೀಸ್ ಠಾಣೆ ಎದುರು
ಅವರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಇದೇ ವೇಳೇ ಪೊಲೀಸ್ ಇಲಾಖೆಯು ಪ್ರಕರಣದ ತನಿಖೆಗೆ ೧೪ ದಿನಗಳ ಕಾಲಾವಕಾಶ ಕೇಳಿದೆ.ಆದರೆ,ಈ ಬಗ್ಗೆ ಪ್ರಶ್ನಿಸಿದ ಸಂದೀಪ್ ರೆಡ್ಡಿ ಹಾಗೂ ಪ್ರತಿಭಟನಾಕಾರರು,ಅಮಾಯಕ ಯುವಕರ ಮೇಲೆ ಕೇಸ್ ಹಾಕುವಾಗ ಅಥವಾ ಬಂಧಿಸುವಾಗ ಇಷ್ಟೊಂದು ಸಮಯಾವಕಾಶ ಏಕೆ ಬೇಕು?.ಶಾಸಕರಿಗೆ ಅನ್ವಯವಾಗುವ ಕಾನೂನು ಸಾಮಾನ್ಯ ಯುವಕರಿಗೂ ಅನ್ವಯವಾಗಲಿ ಎಂದು ಆಗ್ರಹಿಸಿದ್ದಾರೆ.































