
ಹುಮನಾಬಾದ್ :ಜು.3: ತಾಲೂಕಿನ 19 ಗ್ರಾಮ ಪಂಚಾಯತ್‍ಗಳಲ್ಲಿ ಪರಿಶಿಷ್ಟ ಜಾತಿ(ಎಸ್‍ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‍ಟಿ) ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಭಾರತೀಯ ದಲಿತ ಪ್ಯಾಂಥರ್ ಅಧ್ಯಕ್ಷ ಗಣಪತಿ ಅಷ್ಟೂರೆ ಅವರು ನೇತೃತ್ವದಲ್ಲಿ ಶಾಸಕ ಡಾ. ಸಿದ್ದು ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿ ನಂತರ ಮಾತನಾಡಿದ
ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸು ಯೋಜನೆಯ ಒಟ್ಟು ಅನುದಾನದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಎಸ್‍ಸಿ/ಎಸ್‍ಟಿ ಉಪಯೋಜನೆಗಳಿಗೆ (ಎಸ್‍ಸಿಪಿ/ಟಿಎಸ್‍ಪಿ) ಹಣವನ್ನು ಕಾಯ್ದಿರಿಸಿ ಆ ಸಮುದಾಯಗಳ ಅಭಿವೃದ್ಧಿಗೆ ಬಳಸ-ಬೇಕಾಗಿರುವುದು ಕಾನೂನುಬದ್ಧ ನಿಯಮವಾಗಿದೆ. ಆದರೆ, 2025-2026ನೇ ಸಾಲಿನ ಅಧಿಕೃತ ಕ್ರಿಯಾ ಯೋಜನೆ ವರದಿಯಲ್ಲಿ ಅಕ್ರಮಗಳು ಮತ್ತು ಕಾನೂನು ಉಲ್ಲಂಘನೆ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮೇಲಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುಶೀಲಕುಮಾರ್ ಎಚ್. ಭೋಲಾ, ಸಿದ್ಧಾರ್ಥ ಜಾನವೀರ್, ಅನಂತ್ ಮಾಳಗೆ, ವಿಠಲ್ ಶಿವನಾಯಕ್ , ವಿಶಾಲ್ ಸಿಂಧನಕೇರಾ, ದಶರತ್ ದಾಂಡೇಕರ್,ಕರಣ್ ಜನವೀರ್, ಮಂಜು, ಯೋಗಿ, ಸಚಿನ್ ಭೋಲಾ, ಪರಮೇಶ್ವರ್ , ಅಮಿತ್ ಆರ್ಯ,
ಸೇರಿದಂತೆ ಅನೇಕರು ಇದ್ದರು.






























