
ಕೋಲಾರ,ಜೂ,೨೭- ಹಲವಾರು ವರ್ಷಗಳಿಂದ ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ನಿರಂತರವಾಗಿ ವಂಚನೆ ಮಾಡುತ್ತಾ ಬರಲಾಗುತ್ತಿರುವುದು ಜಗಜ್ಜಾಹಿರಾದ ವಿಷಯವಾಗಿದೆ. ಈ ಹಿಂದೆ ದೊಡ್ಡ ಹಗರಣ ರಾಷ್ಟ ಮಟ್ಟದಲ್ಲಿ ನಡೆದಿದ್ದು ನಮ್ಮ ರಾಜ್ಯ ಮಟ್ಟದಲ್ಲೇ ರೈತರಿಂದ ಸುಮಾರು ೨ ಸಾವಿರ ಕೋಟಿಯಷ್ಟು ಹಣವನ್ನು ಲೂಟಿ ಮಾಡಲಾಗಿದೆ. ಇದರ ಮುಂದುವರೆದ ಭಾಗವಾಗಿ ನೆರೆಯ ವಿವಿಧ ರಾಜ್ಯಗಳಲ್ಲಿ ಕೃತಕ ಅಭಾವ ಸೃಷ್ಟಿಸಿ ಯೂರಿಯಾ, ಡಿ.ಎ.ಪಿ.ಗೊಬ್ಬರಗಳನ್ನು ಎಂ.ಆರ್.ಪಿ. ದರಕ್ಕಿಂತ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುವ ಮೂಲಕ ರೈತರನ್ನು ಲೂಟಿ ಮಾಡುತ್ತಿರುವಂತೆ ನಮ್ಮ ಜಿಲ್ಲೆಯಲ್ಲಿ ಈ ಹಗರಣವನ್ನು ನಿಯಂತ್ರಿಸ ಬೇಕೆಂದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನ ಕಾರ್ಯದರ್ಶಿ ಮಹೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿ ರಸಗೊಬ್ಬರಗಳು ರೈತರಿಗೆ ಎಂ.ಆರ್.ಪಿ. ದರದ ಮೇಲೆ ಸಬ್ಸಿಡಿ ನೀಡಲಾಗುತ್ತಿರುವುದನ್ನು ಮರೆ ಮಾಚುವ ಫರ್ಟಿಲೈಸರ್ಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಇದರ ವಿರುದ್ದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕ್ರಮಜರುಗಿಸ ಬೇಕೆಂದು ಒತ್ತಾಯಿಸಿದರು.
ಪ್ರತಿವರ್ಷ ಗೊಬ್ಬರಗಳು ಕೃತಕ ಅಭಾವ ಸೃಷಿಸುವಂತ ಬಂಡವಾಳಷಾಹಿಗಳು ಫರ್ಟಿಲೈಸರ್ಗಳ ಮೂಲಕ ರೈತರ ಸಾವಿರಾರು ಕೋಟಿ ಹಣವನ್ನು ಲೂಟಿ ಮಾಡುತ್ತಿದ್ದಾರೆ ಇದರಲ್ಲಿ ಮಾರಾಟಗಾರರು,ಅಧಿಕಾರಿಗಳ, ರಾಜಕಾರಣಿಗಳು ಶಾಮೀಲಾಗಿದ್ದಾರೆ. ಈ ಸಂಬಂಧವಾಗಿ ಅಧಿಕಾರಿಗಳು ಕಣ್ಮುಂದೆ ನಡೆಯುತ್ತಿದ್ದರೂ ಸಹ ಯಾವೂದೇ ಕ್ರಮ ಕೈಗೊಳ್ಳದಿರುವುದು ಕರ್ತವ್ಯಕ್ಕೆ ದ್ರೋಹಬಗೆಯುವ ಮೂಲಕ ಗೊಬ್ಬರ ಪೂರೈಕೆ ಮತ್ತು ಮಾರಾಟದಲ್ಲಿ ಭಾರಿ ಭ್ರಷ್ಟಚಾರಕ್ಕೆ ಪರೋಕ್ಷವಾಗಿ ಒತ್ತು ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಯೂರಿಯಾ ರಸಗೊಬ್ಬರ ಪ್ರತಿ ೪೫ ಕೆ.ಜಿ. ಚೀಲಕ್ಕೆ ರೂ ೨೬೬.೫ ಇದ್ದರೂ ರಾಜ್ಯದ ಎಲ್ಲೆಡೆ ರೂ.೩೨೦ ರಿಂದ ರೂ ೬೦೦ ವರೆಗೆ ಮಾರಾಟವಾಗುತ್ತಿದೆ. ಡಿ.ಎ.ಪಿ. ಗೊಬ್ಬರ ಗರಿಷ್ಟ ಮಾರಾಟದ ಬೆಲೆ ಪ್ರತಿ ೫೦ ಕೆ.ಜಿ.ಚೀಲಕ್ಕೆ ರೂ.೧,೩೫೦ ನಿಗದಿಪಡಿಸಿದ್ದರೂ ಸಹ ರೂ೧೪೫೦ ಗಳಿಂದ ರೂ ೨೧೦೦ ವರೆಗೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳ ಕುಮ್ಮಕ್ಕು ಇದ್ದು ಪಾಲು ಪಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ದೂರಿದರು.
ಈ ಸಂಬಂಧವಾಗಿ ರಾಜ್ಯದಲ್ಲಿ ಯೂರಿಯಾ ೧೮.೨೬ ಲಕ್ಷ ಟನ್, ಡಿ.ಎ.ಪಿ. ೫.೮೭ ಲಕ್ಷ ಟನ್,ಎಂ.ಈ.ಪಿ.೨.೨೧ ಲಕ್ಷ ಟನ್ ಮತ್ತು ಎನ್.ಪಿ.ಕೆ-೧೬.೬೪ ಟನ್ ಬೇಡಿಕೆ ಇದ್ದು ಅದನ್ನು ಪೂರೈಕೆ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಹಾಗೂ ಬೇಡಿಕೆಗಿಂತ ಹೆಚ್ಚಿನ ದಾಸ್ತನು ದೇಶದಲ್ಲಿದೆ ಎಂದು ಕಳೆದ ಮಾರ್ಚನಲ್ಲಿ ಕೇಂದ್ರ ಸಚಿವರು ರಾಜ್ಯ ಸಭೆಯಲ್ಲಿ ಹೇಳಿಕೆ ನೀಡಿದ ಬೆನ್ನಹಿಂದೆಯೇ ರಾಜ್ಯದಲ್ಲಿ ರಸಗೊಬ್ಬರ ಅಭಾವ ವ್ಯಾಪಕವಾಗಿ ಕಂಡು ಬರುತ್ತಿದೆ ಇದರ ದುರ್ಬಳಿಕೆಯನ್ನು ಪಟ್ಟಭದ್ರ ಹಿತಾಸಕ್ತರು ಮಾಡಿ ಕೊಂಡು ಸಾವಿರಾರು ಕೋಟಿ ರೈತರಿಂದ ಲೂಟಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಈ ಸಂಬಂಧವಾಗಿ ರಾಜ್ಯದಲ್ಲಿ ಅಗತ್ಯವಿರುವಷ್ಟು ರಸಗೊಬ್ಬರ ಪೂರೈಕೆ ಮಾಡಬೇಕು. ಎಲ್ಲಾ ರಸಗೊಬ್ಬರ ಮಾರಾಟಗಾರರು ಎಫ್.ಸಿ.ಓ ೧೯೮೫ರ ಷರತ್ತುಗಳ ಪ್ರಕಾರ ರಸಗೊಬ್ಬರ ಅಂಗಡಿಗಳಲ್ಲಿ ದಾಸ್ತನು ಹಾಗೂ ಮಾರಾಟದ ಬೆಲೆಯ ವಿವರಗಳ ಫಲಕಗಳನ್ನು ಪಾರದರ್ಶಕವಾಗಿ ಅಳವಡಿಸ ಬೇಕು. ರಸಗೊಬ್ಬರದ ಗರಿಷ್ಟ ಬೆಲೆಯಲ್ಲಿ (ಎಂ.ಆರ್.ಪಿ.)ಮಾರಾಟ ಮಾಡ ಬೇಕು. ಫಲಕದಲ್ಲಿ ದೂರು ನೀಡಲು ಕೃಷಿ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸ ಬೇಕು.
ರಸಗೊಬ್ಬರ ಕಂಪನಿಗಳು ಡೀಲರ್ಗಳಿಗೆ ನಿಯಮಾನುಸಾರ ಡೋರ್ ಡಿಲಿವರಿ ಮಾಡುವುದನ್ನು ಖಚಿತ ಪಡೆಸ ಬೇಕು. ರಸಗೊಬ್ಬರದ ಕಂಪನಿಗಳು ಸಬ್ಸಿಡಿ ದರದಲ್ಲಿ ಪೂರೈಕೆ ಜೂತೆಗೆ ಡೀಲರ್ಗಳಿಗೆ ಇದಕ್ಕೆ ಸಂಬಂಧಪಟ್ಟ ಉತ್ಪನ್ನಗಳನ್ನು ಪೂರೈಸುವುದು ಸ್ಥಗಿತ ಗೊಳಿಸ ಬೇಕು. ಮತ್ತು ಡೀಲರ್ಗಳಿಗೆ ಸಂಬಂಧಪಟ್ಟ ಉತ್ಪನ್ನಗಳು ಬಲವಂತವಾಗಿ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕ ಬೇಕು. ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸುವಂತ ಮಾರಾಟಗಾರರ ವಿರುದ್ದ ದೂರು ಬಂದಲ್ಲಿ ಕೊಡಲೇ ಡೀಲರ್ಗಳ ಪರವಾನಗಿಯನ್ನು ರದ್ದು ಪಡೆಸಲು ಕ್ರಮ ಜರುಗಿಸ ಬೇಕೆಂದ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಜಿಲ್ಲಾ ಆಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸುವುದಾಗಿ ತಿಳಿಸಿದರು.































