Home ಜಿಲ್ಲೆ ಕಲಬುರಗಿ ಕಾಳಗಿ ಮತ್ತು ಚಿಂಚೋಳಿ ತಾಲೂಕು ಬರ ಪೀಡಿತ ತಾಲೂಕು ಘೋಷಿಸಿ : ಶಾಸಕ ಡಾ. ಅವಿನಾಶ...

ಕಾಳಗಿ ಮತ್ತು ಚಿಂಚೋಳಿ ತಾಲೂಕು ಬರ ಪೀಡಿತ ತಾಲೂಕು ಘೋಷಿಸಿ : ಶಾಸಕ ಡಾ. ಅವಿನಾಶ ಜಾಧವ

ಕಾಳಗಿ: ಕಾಳಗಿ ಮತ್ತು ಚಿಂಚೋಳಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಸಮರ್ಪಕ ಮಳೆಯಾಗದೆ ಕೃಷಿ ಚಟುವಟಿಕೆ ತೀವ್ರ ಹಿನ್ನಡೆಯಾಗಿದ್ದು, ಬಿತ್ತಿದ ಬೆಳೆಗಳು ಒಣಗುವ ಹಂತ ತಲುಪಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಳಗಿ ಮತ್ತು ಚಿಂಚೋಳಿ ತಾಲೂಕು ಬರಪೀಡಿತ ಎಂದು ಘೋಷಿಸಿ ಶೀಘ್ರ ಪರಿಹಾರ ಕ್ರಮ ಕೈಗೊಳ್ಳುಬೇಕು ಎಂದು ಶಾಸಕ ಡಾ. ಅವಿನಾಶ ಜಾಧವ ಹೇಳಿದರು.

ಪಟ್ಟಣದ ಮುಖ್ಯ ಬಜಾರ್ ಬಸವೇಶ್ವರ ಪುತ್ಥಳಿಯಿಂದ ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಮಾತನಾಡಿದ ಅವರು ಕಾಳಗಿ ಮತ್ತು ಚಿಂಚೋಳಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಬೆಳೆ ನಷ್ಟದಿಂದ ಕೃಷಿಯನ್ನೇ ಅವಲಂಬಿತ ರೈತ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮಳೆಯ ಅಭಾವ, ಬೆಳೆ ಹಾನಿ ಹಾಗೂ ಕುಡಿಯುವ ನೀರಿನ ಲಭ್ಯತೆಯನ್ನು ತಕ್ಷಣವೇ ಪರಿಶೀಲಿಸಿ ತಾಲೂಕನ್ನು ಬರಪೀಡಿತ ಘೋಷಿಸಲು ಸರ್ಕಾರಕ್ಕೆ ಶೀಘ್ರ ಶಿಫಾರಸು ಮಾಡುವುದರ ಜತೆಗೆ, ಸಂಕಷ್ಟದಲ್ಲಿರುವ ರೈತರಿಗೆ ತುರ್ತಾಗಿ ಬೆಳೆ ನಷ್ಟದ ಪರಿಹಾರ ಒದಗಿಸಬೇಕು. ನೀರಿನ ಅಭಾವ ಇರುವ ಗ್ರಾಮಗಳಿಗೆ ತಕ್ಷಣ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಬೇಕು. ಜಾನುವಾರುಗಳ ರಕ್ಷಣೆಗಾಗಿ ಅಗತ್ಯವಿರುವ ಕಡೆಗಳಲ್ಲಿ ತಕ್ಷಣ ಮೇವಿನ ಬ್ಯಾಂಕ್ ಸ್ಥಾಪಿಸಬೇಕು ಹಾಗೂ ಸರ್ಕಾರದ ಬರ ಪರಿಹಾರಯೋಜನೆಯಡಿ ಸಿಗುವ ಎಲ್ಲಾ ಸೌಲಭ್ಯ ಅರ್ಹ ರೈತರಿಗೆ ತಲುಪಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಗೌತಮ್ ಪಾಟೀಲ, ಬಿಜೆಪಿ ಚಿಂಚೋಳಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ಶಶಿಕಲಾ ಟೆಂಗಳಿ, ಬಸವರಾಜ ಬೆಣ್ಣೂರಕರ್, ಮಹೇಂದ್ರ ಪೂಜಾರಿ,ಸುಂದರ ಸಾಗರ, ಪ್ರಶಾಂತ ಕದಂ, ಗೋಪಾಲರಾವ ಕಟ್ಟಿಮನಿ, ಶಿವರಾಜ ಪಾಟೀಲ ಗೋಣಗಿ, ಜಗದೀಶ ಪಾಟೀಲ, ಸಂತೋಷ ಪಾಟೀಲ ಮಂಗಲಗಿ, ರಮೇಶ ಕಿಟ್ಟದ, ಪುರುಷೋತ್ತಮ ಗುತ್ತೇದಾರ, ಶ್ರೀನಿವಾಸ ಮಂಗಲಗಿ, ನಾಗರಾಜ ಕೇಶ್ವರ, ಮಲ್ಲಿನಾಥ ಪಾಟೀಲ, ಶೇಖರ ಪಾಟೀಲ, ಶಿವರಾಜ ಪಾಟೀಲ ಅಣಕಲ್, ಮಲ್ಲಿಕಾರ್ಜುನ ರುದ್ನೂರ್, ಭೀಮರಾಯ ಮಲಘಾಣ, ಕೆ.ಎಮ್. ಬಾರಿ , ಸಿದ್ದು ಮಾನಕಾರ್ ರಾಜು ಗುಡುದ್, ಸಿದ್ದು ಕೇಶ್ವರ, ಮಲ್ಲಿಕಾರ್ಜುನ ಸಿಂಗೆ, ಮಲ್ಲು ಮರುಗುತ್ತಿ, ಮೋಹನ ಚಿನ್ನ, ಇಂದ್ರಜೀತ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.