
ಕಲಬುರಗಿ,ಜೂ.2-ನಗರದ ಎಂಎಸ್‍ಕೆ ಮಿಲ್‍ನ ಜಾವೀದ್ ಮನಿಯಾರ್ ಮತ್ತು ಫರಹತಾಬಾದ್‍ನ ಸಮೀರ್ ಮಿಯಾ ಅವರು ಸೈಬರ್ ವಂಚಕರೊಂದಿಗೆ ಸೇರಿಕೊಂಡು ತಮ್ಮ ಬ್ಯಾಂಕ್ ಖಾತೆಗಳನ್ನು ಸ¨ರ್ ಅಪರಾಧಕ್ಕೆ ಬಳಕೆ ಮಾಡಿಕೊಂಡು ಮ್ಯೂಲ್ ಬ್ಯಾಂಕ್ ಖಾತೆಗಳಿಗೆ ಆನ್‍ಲೈನ್ ಮುಖಾಂತರ 70.70 ಲಕ್ಷ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಸೈಬರ್ ಕಮಾಂಡ್ ಘಟಕದ ಡಿಜಿಪಿ ಅವರ ಸೂಚನೆ ಮೇರೆಗೆ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆ ಸಿಪಿಸಿ ಅಂಬ್ರೇಶ್ ಅವರು ಕಲಬುರಗಿ ನಗರ ವ್ಯಾಪ್ತಿಗೆ ಒಳಪಡುವ ಮ್ಯೂಲ್ ಖಾತೆಗಳನ್ನು ಪರಿಶೀಲಿಸಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಜಾವೀದ್ ಮನಿಯಾರ್ ಮತ್ತು ಸಮೀರ್ ಮಿಯಾ ಅವರು ಸೈಬರ್ ವಂಚಕರೊಂದಿಗೆ ಕೂಡಿಕೊಂಡು ತಮ್ಮ ಖಾತೆಗಳನ್ನು ಸಬರ್ ಅಪರಾಧಕ್ಕೆ ಬಳಕೆ ಮಾಡಿಕೊಂಡು ಆನ್‍ಲೈನ್ ಮುಖಾಂತರ 70.70 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿರುವ ಬಗ್ಗೆ ಇಬರಿಬ್ಬರ ವಿರುದ್ಧ ಹರಿಯಾಣ ರಾಜ್ಯದ ಗುರುಗ್ರಾಮ್ ಜಿಲ್ಲೆಯ ಮನೆಸಾರ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಇಬ್ಬರು ಸೈಬರ್ ವಂಚಕರ ವಿರುದ್ಧ ಇದೀಗ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
























