Home ಜಿಲ್ಲೆ ಬೆಂಗಳೂರು ಪಾರ್ಥೇನಿಯಂ ಕಳೆಯಿಂದ ಹಾನಿ ಕುರಿತು ರೈತರಿಗೆ ಜಾಗೃತಿ

ಪಾರ್ಥೇನಿಯಂ ಕಳೆಯಿಂದ ಹಾನಿ ಕುರಿತು ರೈತರಿಗೆ ಜಾಗೃತಿ

ಕೋಲಾರ.ಆ,೩೧-ಬೆಳೆಗಳಿಗೆ ಹಾನಿ ತಡೆಯಲು ಪಾರ್ಥೇನಿಯಂ ನಿಯಂತ್ರಣ ಹಾಗೂ ಅದರ ದುಷ್ಪರಿಣಾಮಗಳ ಕುರಿತು ರೈತರು ಅರಿತುಕೊಳ್ಳಬೇಕು ಎಂದು ಚಿಂತಾಮಣಿ ರೇಷ್ಮೆ ಕೃಷಿ ವಿವಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.


ಜಿಲ್ಲೆಯ ಕೊಳತೂರು ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರೇಷ್ಮೇ ಕೃಷಿ ಮಹಾವಿದ್ಯಾಲಯ ಚಿಂತಾಮಣಿಯ ಬಿಎಸ್‌ಸಿ ಕೃಷಿ ವಿಧ್ಯಾರ್ಥಿಗಳಿಂದ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಪಾರ್ಥೇನಿಯಂ ಜಾಗೃತಿ ಸಪ್ತಾಹದ ಅಂಗವಾಗಿ ಕಾರ್ಯಕ್ರಮ ನಡೆಸಿದ ವಿದ್ಯಾರ್ಥಿಗಳು, ರೈತರಿಗೆ ಜಾಗೃತಿ ಮೂಡಿಸಿದ್ದರ ಜತೆಗೆ ಗ್ರಾಮದಲ್ಲಿ ಪಾರ್ಥೇನಿಯಂ ನಾಶಕ್ಕೆ ಶ್ರಮದಾನ ನಡೆಸಿದರು.


ರೇಷ್ಮೇ ಕೃಷಿ ಮಹಾವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಡಾ.ಕೆ.ಎಂ.ಶ್ರೀನಿವಾಸರೆಡ್ಡಿ ಮಾತನಾಡಿ, ಪಾರ್ಥೇನಿಯಂ ಕಳೆಯ ಪರಿಚಯ, ಅದರ ವೇಗದ ಬೆಳವಣಿಗೆ ಕುರಿತು ತಿಳಿಸಿಕೊಟ್ಟು, ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.


ಪಾರ್ಥೇನಿಯಂ ಇತರೆ ಬೆಳೆಗಳಮೇಲೆ ಬೀರುವ ದುಷ್ಪರಿಣಾಮ, ಜಾನುವಾರುಗಳು ಮತ್ತು ಮಾನವ ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮಗಳ ಕುರಿತು ರೈತರಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ವಿಭಾಗದ ಡಾ.ಸುನಿತಾ, ಬೇಸಾಯ ಶಾಸ್ತ್ರ ವಿಭಾಗದ ಡಾ.ಚೈತ್ರಾ ಜಿ.ಎಂ. ಹಾಗೂ ಗ್ರಾಮಸ್ಥರು, ವಿದ್ಯಾರ್ಥಿಗಳಾದ ಅತೀಶ್ ಪಟೇಲ್ ಡಿ.ಎಸ್., ಎಂ.ಚೇತನ್, ಪಿ.ಜಿ.ದೀಪಿಕಾ, ಎಸ್.ದ್ವಾರಕಿ, ಜಿ.ಗಾನವಿ, ಜಿ.ಹೆಚ್.ಗುರುದೇವಿ, ಜೆ.ಭೀಮರಾಜ್, ಸಿ.ಕಮಲಾಕ್ಷಿತ, ಜೆ.ಲೀಲಾ, ಪಿ.ಮೌನೇಶ್, ರಾಹುಲ್ ಸಿಂದೆ, ಸಿದ್ದಲಿಂಗ ರೆಡ್ಡಿ, ಬಿ.ವಿನಾಯಕ ತರುಣ್ ಎಎಚ್ ಮತ್ತಿತರರಿದ್ದರು.