
ಬೆಂಗಳೂರು, ಸೆ. ೧- ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಜಿ ಹಲ್ದವಾನಿ ಯಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡುವುದರ ಮೂಲಕ ದೇಶದ ನಾಗರೀಕರನ್ನು ಹಾಗೂ ದಲಿತ ನಾಯಕರನ್ನು ಅವಮಾನಿಸಿದ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ರಾಹುಲ್ ಗಾಂಧಿಯವರ ವಿರುದ್ಧವೇ ಈIಖ ದಾಖಲಿಸುವ ಮೂಲಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಕಗ್ಗೊಲೆ ಮಾಡಲು ಯತ್ನಿಸುತ್ತಿರುವ ಕೇಂದ್ರ ಹಾಗೂ ಉತ್ತರಖಂಡದ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ಹಾಗೂ ಪ್ರತಿಕೃತಿದಹನ ನಡೆಸಿದರು.
ನರೇಂದ್ರ ಮೋದಿಯ ಸರ್ವಾಧಿಕಾರಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಎರಡು ಕಗ್ಗೊಲೆಯಾಗುತ್ತಿದೆ ದಲಿತರನ್ನು ಅಪಮಾನಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ ಅಂದರೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ರವರ ವಿರುದ್ದವೇ ಎಫ್‌ಐಆರ್ ದಾಖಲಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರನ್ನು ಪ್ರಶ್ನಿಸುವ ಹಕ್ಕು ಸಂವಿಧಾನ ನೀಡಿದೆ ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡುರುವ ಸಂವಿಧಾನದ ಹಕ್ಕನ್ನ ಬಿಜೆಪಿ ಕಸಿಯುತ್ತಿದೆ, ಭ್ರಷ್ಟ ಬಿಜೆಪಿ ಸರ್ವಾಧಿಕಾರಿ ಕೇಂದ್ರ ಸರ್ಕಾರ, ರಾಹುಲ್ ಗಾಂಧಿ ರವರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕು ರಾಹುಲ್ ಗಾಂಧಿಯವರ ವಿರುದ್ಧ ದಾಖಲಿಸಿರುವ ಪ್ರಕರಣ ಅದು ದೇಶದ ನಾಗರೀಕರ ಮೇಲೆ ದಾಖಲಿಸುವ ಪ್ರಕರಣವೆಂದು ಈಗಾಗಲೇ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸು ತ್ತಿದ್ದಾರೆ. ಕೇವಲ ಆರು ವರ್ಷದ ಬಾಲಕನಿಗೆ ಉತ್ತರಿಸಲು ಯೋಗ್ಯತೆ ಇಲ್ಲದ ಬಿಜೆಪಿ ಸರ್ಕಾರ ಇಂದು ನಾಗರೀಕರ ಹಕ್ಕನ ಕಸಿಯುತ್ತಿದೆ. ಹಲ್ದಾವನಿಯ ಪ್ರಕರಣದಲ್ಲಿ ದ್ವೇಷ ರಾಜಕೀಯ ಮಾಡುತ್ತಿರುವ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಬೇಕು ನರೇಂದ್ರ ಮೋದಿ ಹಾಗೂ ಉತ್ತರಖಂಡದ ಮುಖ್ಯಮಂತ್ರಿ ಕೂಡಲೇ ನೈತಿಕ ಹೊಣೆ ಹೊತ್ತು ಕ್ಷಮೆ ಕೋರಿ ತೊಲಗಬೇಕೆಂದು ಈ ಪ್ರತಿಭಟನೆಯ ಮೂಲಕ ಆಗ್ರಹ ಪಡಿಸಲಾಯಿತು.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್ ರವರು ಎ.ಆನಂದ್ , ಪ್ರಕಾಶ್, ಪರಿಸರ ರಾಮಕೃಷ್ಣ, ಉಮೇಶ್, ಪುಟ್ಟರಾಜು, ಕುಶಾಲ್ ಗೌಡ, ಸುಂಕದಕಟ್ಟೆ ನವೀನ್, ಮಾಧವಹನೂರು, ಸಾಯಿನವೀನ್, ಕಿಶೋರ್,,ಶಾಹಿನ್ ಶರೀಪ್ ಭಾಗವಹಿಸಿದರು.
































