Home ಜಿಲ್ಲೆ ಕ್ರೀಡಾಕೂಟಕ್ಕೆ ಚಾಲನೆ

ಕ್ರೀಡಾಕೂಟಕ್ಕೆ ಚಾಲನೆ


ಧಾರವಾಡ, ಸೆ. ೧: ಧಾರವಾಡದ ರಾಜೀವ್ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆತಿಥ್ಯದಲ್ಲಿ ಸಪ್ತಾಪುರ ಕ್ಲಸ್ಟರ್ ಮಟ್ಟದ ಶಾಲೆಗಳ ಕ್ರೀಡಾಕೂಟ ಚಾಲನೆ ನೀಡಲಾಯಿತು.
ಕ್ರೀಡಾಕೂಟವನ್ನು ಸಂಜಯ ಕಪಠಕರ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೂ ಕ್ರೀಡೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮಹಾಪೌರರಾದ ಈರೇಶ ಅಂಚಟಗೇರಿ ಅವರು ಮಾತನಾಡಿದರು.
“ಗೆದ್ದವರಿಗೆ ಅಭಿನಂದನೆಗಳು; ಗೆಲ್ಲದವರು ನಿರಾಶರಾಗಬಾರದು. ಸೋಲು ಎಂಬುದು ಅಂತ್ಯವಲ್ಲ?ಅದು ಮುಂದಿನ ಗೆಲುವಿಗೆ ಸಿದ್ಧತೆ” ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.


ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಎಸ್. ರಾಧಾಕೃಷ್ಣನ್ ಹಾಗೂ ಬಸವರಾಜ ತಾಳಿಕೋಟಿ ಉಪಸ್ಥಿತರಿದ್ದರು. ಪ್ರವೀಣಕುಮಾರ ಗುಜ್ಜರ ಹಾಗೂ ಶೋಭಾ ಕುಸುಗಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.